ಕಲಬುರಗಿ : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರ ಮತ್ತು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಗಳ ಕುರಿತಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿದ್ದು, ರಾಜ್ಯದಲ್ಲಿನ ಶಾಂತಿ–ಸುವ್ಯವಸ್ಥೆ ಕದಡಲು ಈ ರೀತಿ ಸೃಷ್ಟಿ ಮಾಡ್ತಾ ಇದ್ದಾರೆ. ಇದಕ್ಕೆ ನಮ್ಮ ಸರ್ಕಾರ ಸೊಪ್ಪು ಹಾಕಲ್ಲ, ಇಂತಹ ಸಿಲ್ಲಿ ಅಟೆಂಪ್ಟ್ಗಳಿಂದ ಸರ್ಕಾರ ವಿಚಲಿತವಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಇವಾವುದಕ್ಕೂ ಆಸ್ಪದವಿಲ್ಲ. ನಮ್ಮ ಸರ್ಕಾರದ ಉದ್ದೇಶ ರಾಜ್ಯದ ಯೋಗಕ್ಷೇಮ, ಶಾಂತಿ–ಸುವ್ಯವಸ್ಥೆ ಮತ್ತು ಅಭಿವೃದ್ಧಿ ಇದು ಒಂದೇ ಗುರಿ ಎಂದರು. ಇತರಹದ ಕೃತ್ಯಗಳು ಪ್ರತಿದಿನ ನಡೆಯಲ್ಲ. ಬಿಗಿ ಭದ್ರತೆಯ ಸಂಸತ್ತಿನಲ್ಲಿ ಅಂತಹ ದೊಡ್ಡ ಘಟನೆ ನಡೆದಿದೆ. ಸಂಸತ್ತಿಗೆ ಇರುವಷ್ಟು ಭದ್ರತೆ ವಿಧಾನಸೌಧಕ್ಕೆ ಇಲ್ಲ. ಸಭಾಪತಿಗಳು ಇನ್ಮುಂದೆ ಬಿಗಿ ಭದ್ರತೆ ಮಾಡುತ್ತಾರೆ. ಇನ್ನು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಎಫ್ಎಸ್ಎಲ್ ವರದಿ ಬಂದರೇ ಕ್ರಮ ಕೈಗೊಳ್ಳುತ್ತೇವೆ. ಕೆಲವರು ವಾಕ್ ಸ್ವಾತಂತ್ರ್ಯವನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳುತ್ತೆವೆ ಎಂದು ಹೇಳಿದರು.