ಕಲಬುರಗಿ : ಮಲ್ಲಿಕಾರ್ಜುನ ಖರ್ಗೆ ಅವರನ್ನು ಚಕ್ರವರ್ತಿ ಸೂಲಿಬೆಲೆ ಅವಾಚ್ಯವಾಗಿ ನಿಂದಿಸಿದ ವಿಚಾರ ಕುರಿತು ಮಾತನಾಡಿದ ಅವರು, ಸೂಲಿಬೆಲೆ ಚಕ್ರವರ್ತಿ ಬಗ್ಗೆ ಮಾತಾಡಲು ಏನೂ ಇಲ್ಲ, ಕೇಸ್ ರೆಜಿಸ್ಟರ್ ಆಗಿದೆ. ಸದ್ಯದಲ್ಲೇ ನೋಟೀಸ್ ಹೋಗುತ್ತೆ, ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇದು ಕ್ಲಿಯರ್ ಕೇಸ್ ಆಫ್ ಮೀಸ್ ಇನ್ಫಾರ್ಮೇಶನ್, ಆತ ಒಬ್ಬ ಬಾಡಿಗೆ ಬಾಷಣಕಾರ.
ಆತ ವಾಟ್ಸಪ್ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್. ಇಂತವರಿಗೆ ಮಾತಾಡಲು ಬಿಟ್ಟರೇ ಇದೆ ಆಗೋದು. ಈತ ತಾನೊಬ್ಬ ದೊಡ್ಡ ವಿದ್ವಾನ ರೀತಿ ಮಾತಾಡ್ತಾನೆ. ಹಿಂದಿನ ಸರ್ಕಾರದಲ್ಲಿ ಇಂತಹ ಸುಳ್ಳು ಹೇಳಲು ಅವನಿಗೆ ಕೋಟ್ಯಾಂತರ ರೂ. ಕೊಟ್ಟಿದ್ದಾರೆ. ಒಂದು ಗ್ರಾಮ ಪಂಚಾಯತ್ ಗೆಲ್ಲಲು ಯೋಗ್ಯತೆ ಇಲ್ಲ ಅವನಿಗೆ. ಅವನು ಇವತ್ತು ಖರ್ಗೆ ಅವರ ಬಗ್ಗೆ ಮಾತಾಡ್ತಾನೆ ಅಂದ್ರೆ ಆಕಾಶ ನೋಡಿಕೊಂಡು ಉಗುಳಿದಂತೆ ಎಂದು ಕಿಡಿಕಾರಿದರು.