ಜೈಪುರ್ : ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿದಂತೆ ದೇಶದಲ್ಲಿ ನಡೆಯುವ ಲೋಕಸಭೆ ಚುನಾವಣೆಗಾಗಿ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ. ರಾಜಸ್ಥಾನದಲ್ಲಿ ವಾಘಡನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಯುವ ನ್ಯಾಯ ಹೆಸರಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದರು.
ಮೊದಲ ಗ್ಯಾರಂಟಿಯಾಗಿ ಯುವಕರಿಗೆ ನೇಮಕಾತಿ ಭರವಸೆ ಯೋಜನೆ, ಎರಡನೆಯದಾಗಿ, ನೌಕರಿ ಭದ್ರತೆ, ಮೂರನೆಯದಾಗಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ತಡೆ, ನಾಲ್ಕನೆಯದಾಗಿ ಬಡವರು, ಶ್ರಮಜೀವಿಗಳ ಆರ್ಥಿಕ ಭದ್ರತೆಗಾಗಿ ಸಾಮಾಜಿಕ ಸುರಕ್ಷಾ ಯೋಜನೆ ಹಾಗೂ ಐದನೆಯದಾಗಿ ಯುವ ರೋಶನಿ ಎನ್ನುವ ಗ್ಯಾರಂಟಿಗಳನ್ನು ಅವರು ಘೋಷಿಸಿದರು.
ಪ್ರಧಾನಿ ಮೋದಿ ಯುವಕರಿಗೆ ಅಗ್ನಿ ವೀರ ಎನ್ನುವ ತಾತ್ಕಾಲಿಕ ಉದ್ಯೋಗ ಯೋಜನೆ ಮಾಡಿದ್ದು, ಇದರಿಂದ ಯುವಕರಿಗೆ ಕೇವಲ 3-4 ತಾತ್ಕಾಲಿಕ ವರ್ಷದ ನೌಕರಿ ಸಿಗುತ್ತೆ . ಆದರೆ, 4 ವರ್ಷದ ನಂತರ ಮತ್ತೆ ನಿರುದ್ಯೋಗಿಯಾಗುತ್ತಾರೆ ಎಂದರು. ಕಾಂಗ್ರೆಸ್ ಯುವಕರಿಗೆ ಪೂರ್ಣಾವಧಿಯ ಉದ್ಯೋಗ ನೀಡಲಿದೆ ಎಂದು ಭರವಸೆ ನೀಡಿದರು.