
ಹುಬ್ಬಳ್ಳಿ; ತೀವ್ರ ಕುತೂಹಲ ಮೂಡಿಸಿದ ಧಾರವಾಡ ಲೋಕಸಭಾ ಬಿಜೆಪಿ ಟಿಕೆಟ್ ಈ ಬಾರಿ ಮತ್ತೆ ಹಾಲಿ ಸಂಸದ ಪ್ರಹ್ಲಾದ್ ಜೋಶಿ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕ್ಷೇತ್ರದಲ್ಲಿ ಟೆಂಪಲ್ ರನ್ ಆರಂಭಿಸಿದ್ದಾರೆ. ಬಿಜೆಪಿ ಟಿಕೆಟ್ ಘೋಷಣೆಯ ಬಳಿಕ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿರೋ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉತ್ತರ ಕರ್ನಾಟಕ ಪ್ರತಿಷ್ಠಿತ ಮಠ ಎಂದು ಕರೆಯಿಸಿಕೊಳ್ಳುವ ಸದ್ಗುರು ಶ್ರೀ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ, ಶ್ರೀ ಸಿದ್ದಾರೂಢ ಮತ್ತು ಗುರುನಾಥರೂಢರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಆರ್ಶೀವಾದ ಪಡೆದುಕೊಂಡರು.
ಬಳಿಕ ಗೋಕುಲ್ ರೋಡ್‌ನ ಆರ್ ಎಸ್ ಎಸ್ ಕಚೇರಿಯ ಕೇಶವ ಕುಂಜಕ್ಕೆ ಭೇಟಿ ನೀಡಿ, ಆರ್ ಎಸ್ ಎಸ್ ಹಿರಿಯರ ಆರ್ಶೀವಾದ ಪಡೆದುಕೊಂಡರು. ನಂತರ ಧಾರವಾಡಗೆ ಭೇಟಿ ನೀಡಲಿರುವ ಜೋಶಿ
ಮುರುಘಾಮಠಕ್ಕೆ ಭೇಟಿ ನೀಡಿ, ಶ್ರೀ ಮಲಿಕಾರ್ಜುನ ಸ್ವಾಮಿಜಿಗಳ ಆರ್ಶೀವಾದ ಪಡೆಯಲಿದ್ದಾ




