ಹುಬ್ಬಳ್ಳಿ : ರಾಮ ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗುವುದಿಲ್ಲ. ಅದು ಅವರ ರಾಜಕೀಯ ಇಚ್ಛಾಶಕ್ತಿಯಿಂದ ಆಗಿರೋದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಅದೂ ಶೇ.40 ರಷ್ಟು ಮಾತ್ರ ನಿರ್ಮಾಣ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಮಂದಿರ ನಿರ್ಮಾಣ ಆಗಬೇಕಾದ ಜಾಗದಲ್ಲಿ ಆಗಿಲ್ಲ. ಈಗ ಮಂದಿರ ನಿರ್ಮಾಣ ಮಾಡಿರೋ ಜಾಗವು ಸರಿ ಇಲ್ಲ. ಸುಪ್ರೀಂಕೋರ್ಟ್ ಸೂಚಿಸಿದ ಜಾಗದಲ್ಲಿ ಮಂದಿರ ಕಟ್ಟಿಲ್ಲ ಎಂದರು.
ದೇಶದಲ್ಲಿ ಹತ್ತು ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ಎಂದು ಹೇಳಿದ ಸಂತೋಷ್ ಲಾಡ್, ರಾಮ ಮಂದಿರದ ಹೆಸರಿನಲ್ಲಿ ಯಾಕೆ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು. ಅಲ್ಲದೆ, ಕಳೆದ 10 ವರ್ಷದಲ್ಲಿ ಮೋದಿ ಸರ್ಕಾರ ಏನು ಕೆಲಸ ಮಾಡಿದೆ? ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ದರ ಕಡಿಮೆ ಆಗಿದೆಯಾ? ಬಡವರಿಗೆ ಅನುಕೂಲವಾಗುವ ಒಂದು ಕಾರ್ಯಕ್ರಮ ಮಾಡಿಲ್ಲ. ದೇಶ ಹಳ್ಳ ಹಿಡಿದು ಹೋಗಿದೆ ಎಂದರು.
ಅಧಿಕಾರ ಇದೆ ಎಂದು ದುರುಪಯೋಗ ಮಾಡಬಾರದು. ನೀವ ಪ್ರಭಾವಿಯಾಗಿದ್ದರೆ ಟಿವಿ ಆಫ್ ಮಾಡಿ ಬನ್ನಿ. ರಾಮ ರಹೀಮ್, ಪಾಕಿಸ್ತಾನ ಅಪಘಾನಿಸ್ತಾನ ಹೆಸರು ಮೂಲಕ ಜನರನ್ನು ಹುಚ್ಚರನ್ನಾಗಿ ಮಾಡುತ್ತಾರೆ. ಚೈನಾದಿಂದಲೇ ಪಾಕಿಸ್ತಾನದ ಜಿಡಿಪಿ 20%ಇದೆ. ಇಂದು ಚೈನಾ ಮಾಲ್ಡೀವ್ಸ್‌ಗೆ ಫಂಡ್ ಮಾಡುತ್ತಿದೆ. ಅದೇ ದೇಶ ಈಗ 2024ರಲ್ಲಿ 20 ಟ್ರಿಲಿಯನ್ ಡಾಲರ್ ಹೋಗಿದೆ. ನಮ್ಮ ದೇಶಕ್ಕೂ ಚೈನಾಗೂ ಎಷ್ಟು ವ್ಯತ್ಯಾಸವಿದೆ ಇದರ ಬಗ್ಗೆ ಚರ್ಚೆ ಆಗಲಿ. ದೇಶದಲ್ಲಿ ಈ ತರಹ ಚರ್ಚೆಗಳೇ ಆಗ್ತಿಲ್ಲ ಎಂದರು.