ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ಅವರು ಬಿಜೆಪಿಗೆ ಸೇರಿರುವುದು ನನಗೆ ವೈಯಕ್ತಿಕವಾಗಿ ಖುಷಿಯಾಗಿದೆ. ಅವರು ಪಕ್ಷವನ್ನ ತೊರೆದಿರುವುದು ನಮ್ಮ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದರು.
ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಆಗಿರುವುದು ಬಿಜೆಪಿಗರಿಗೆ ಸಂತಸವಾಗಿದೆ ಅಂತಾ ಹೇಳಿದ್ದಾರೆ ಹೀಗಾಗಿ ನಮಗೂ ಸಂತಸವಾಗಿದೆ. ಶೆಟ್ಟರ್ ಅವರಿಗೆ ನಮ್ಮ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಿದ್ದೆವು. ಆದ್ರೆ ಅವರು ಈ ರೀತಿ ಏಕಾಏಕಿ ಪಕ್ಷ ತೊರೆದಿದ್ದಾರೆ. ಶೆಟ್ಟರ್ ಅವರ ಇತ್ತೀಚಿನ ಬೆಳವಣಿಗೆ ಗಮನಿಸಿದ್ರೆ ಅವರೊಬ್ಬ ಅವಕಾಶವಾದಿಗಳು ಅನ್ನಿಸುತ್ತೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಎಲ್ಲ ಸಮುದಾಯದವರೂ ಇದ್ದಾರೆ. ಬಿಜೆಪಿಗೂ ನಮ್ಮ ಪಕ್ಷಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಶೆಟ್ಟರ್ ಅವರ ಮೇಲೆ ನನಗೆ ಅಪಾರ ಗೌರವವಿದೆ. ಆದ್ರೆ ಅವರು ಪಕ್ಷ ಬಿಟ್ಟು ಹೋದದ್ದು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಶೆಟ್ಟರ್ ಪಕ್ಷ ತೊರೆದ ವಿಚಾರವಾಗಿ ಸಚಿವ ಸಂತೋಷ ಲಾಡ್ ನಗುತ್ತಲೇ ಉತ್ತರಿಸಿದ್ರು.