ಹುಬ್ಬಳ್ಳಿ : ಈಗಾಗಲೇ ರವಿಕೆ ಚಿತ್ರದ ಟ್ರೈಲರ್ ಹಾಗೂ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು, ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇದೇ ಫೆ.16 ರಾಜ್ಯಾದ್ಯಂತ ರವಿಕೆ ಪ್ರಸಂಗ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಸಂತೋಷ ಕೊಡನಕೇರಿ ತಿಳಿಸಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಿರುತೆರೆಯಲ್ಲಿ ಗುಂಡಮ್ಮ ಎಂದೇ ಖ್ಯಾತಿ ಹೊಂದಿದ್ದ ಗೀತಾ ಭಾರತಿ ಭಟ ಅವರು ನಾಯಕಿ ಹಾಗೂ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ರವಿಕೆ ಪ್ರಸಂಗ ಚಿತ್ರದ ಮುಖ್ಯ ಹೈಲೆಟ್ ಅಂದ್ರೆ ರವಿಕೆ ಆಗಿದೆ, ಉತ್ತರ ಕರ್ನಾಟಕದ ಭಾಷೆಯಲ್ಲಿ ಬ್ಲೌಸ್ ಆಗಿದೆ. ಸೀನಿ ರಸಿಕರಿಗೆ ಇದೊಂದು ವಿಭಿನ್ನ ಅನುಭವ ನೀಡುವ ಚಿತ್ರವಾಗಿದೆ.
ದಕ್ಷಿಣ ಕನ್ನಡದಲ್ಲಿ ನಮ್ಮ ಸಿನಿಮಾವನ್ನು ಹೆಚ್ಚಾಗಿ ಚಿತ್ರೀಕರಣ ಮಾಡಲಾಗಿದೆ. ಒಂದು ವಸ್ತುವನ್ನು ಇಟ್ಟುಕೊಂಡು ಚಿತ್ರ ನಿರ್ಮಾಣ ಮಾಡಲಾಗಿದೆ. ಎಲ್ಲರೂ ಚಿತ್ರ ಮಂದಿರಕ್ಕೆ ಬಂದು ನೋಡಿ ಆರ್ಶೀವಾದ ಮಾಡಬೇಕು. “ರವಿಕೆಗೆ” ಹುಕ್ ಹೇಗೆ ಮುಖ್ಯವೋ ಹಾಗೇ ಜೀವನದ ಕೆಲವು ಸಂಘರ್ಷಗಳು, ಸಂಬಂಧಗಳು ಅತೀ ಮುಖ್ಯವಾಗುತ್ತವೆ. ರವಿಕೆಯ ಒಂದು ಸಣ್ಣ ವಿಚಾರ ನ್ಯಾಷನಲ್ ಇಶ್ಯೂ ಆಗುವತ್ತ ಹೋಗುವ ಮತ್ತು ಜೀವನದ ಮೌಲ್ಯಗಳ ಅರ್ಥವನ್ನು “ರವಿಕೆ ಪ್ರಸಂಗ” ಚಿತ್ರದ ಮೂಲಕ ನಿಮ್ಮ ಮುಂದೆ ತರಲಾಗುತ್ತಿದೆ.
ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಇದಾಗಿದ್ದು, ಎಲ್ಲರೋ ನೋಡಬೇಕು, ಎಲ್ಲರಿಗೂ ಚಿತ್ರ ಇಷ್ಟವಾಗುತ್ತದೆ ಎಂದು ಹೇಳಿದರು. ಇದೇ ವೇಳೆ ಚಿತ್ರದ ನಾಯಕಿ ಗೀತಾ ಭಾರತಿಭಟ್ ಮಾತನಾಡಿ, ಚಿತ್ರವು ಕುಡುಂಬ ಸಮೇತವಾಗಿ ಬಂದು ನೋಡುವಂತಾಗಿದೆ. ಚಿತ್ರದಲ್ಲಿ ಎಮೋಷನ್, ಕಾಮಿಡಿ, ಜೀವಮದಲ್ಲಿ ಹೆಣ್ಮಕ್ಕಳ ಸಮಸ್ಯೆ ಜೊತೆಗೆ ಒಂದು ಉತ್ತಮ ಸಂದೇಶ ನೀಡುವ ಚಿತ್ರವಾಗಿದೆ. ಎಲ್ಲರು ಬಂದು ನೋಡಿ ಅರ್ಶೀವಾದ ಮಾಡಲು ಮನವಿ ಮಾಡಿದರು.