ಹುಬ್ಬಳ್ಳಿ; ಹುಬ್ಬಳ್ಳಿಯ ತೋಳಲನಕೆರೆ ವೃತ್ತದಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರವರ ಪುತ್ಥಳಿ ನಿರ್ಮಾಣ ಹಾಗೂ ರಸ್ತೆಗೆ ಪುನೀತ್ ಹೆಸರನ್ನ ನಾಮಕರಣಕ್ಕೆ ಅಗ್ರಹಿಸಿ ಹುಬ್ಬಳ್ಳಿಯಲ್ಲಿ ಅಪ್ಪು ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಹು- ಧಾ ಮಹಾನಗರ ಪಾಲಿಕೆ ಆಯುಕ್ತರಿಗೆ ಪುನೀತ್ ಅಭೀಮಾನಿಗಳು ಮನವಿ ಸಲ್ಲಿಸಿದರು.
ರಾಜರತ್ನ ಕನ್ನಡ ಯುವ ಸಮಿತಿ ನೇತೃತ್ವದಲ್ಲಿ ನಗರದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟಿನೆ ನಡೆಸಿ ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ಹೊರಹಾಕಿದರು.
ಹುಬ್ಬಳ್ಳಿಯಲ್ಲಿ ಕಳೆದೆರಡು ವರ್ಷಗಳಿಂದ ಡಾ. ಪುನೀತ ರಾಜಕುಮಾರವರ ಪುತ್ಥಳಿ ನಿರ್ಮಾಣ ಸೇರಿದಂತೆ ಪ್ರಮುಖ ಬೀದಿಗೆ ಹೆಸರು ನಾಮಕರಣ ಮಾಡಲು ಮನವಿ ನೀಡಲಾಗುತ್ತಿದೆ. ಆದರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದನೆ ಮಾಡುತ್ತಿಲ್ಲ. ಹಾಗಾಗಿ ಈಗ ಮತ್ತೊಮ್ಮೆ ಮನವಿ ನೀಡುತ್ತಿದ್ದೇವೆ. ಕೂಡಲೇ ಪಾಲಿಕೆ ಆಯುಕ್ತರು ತೋಳಲನಕೆರೆ ವೃತ್ತದಲ್ಲಿ ದಿವಂಗತ ಡಾ.ಪುನೀತ ರಾಜಕುಮಾರವರ ಪುತ್ಥಳಿ ನಿರ್ಮಿಸಲು ಸೂಚನೆ ನೀಡಬೇಕು. ಜೊತೆಗೆ ವಿದ್ಯಾಮಗರದಿಂದ ತೋಳಲನಕೆರೆ ಸಂರ್ಪಕಿಸುವ ರಸ್ತೆಗೆ ಪುನೀತ ರಾಜಕುಮಾರವರ ಹೆಸರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ, ನಾವೇ ಎಲ್ಲ ಸಂಘಟನೆಗಳೊಂದಿಗೆ ಪುತ್ಥಳಿ ನಿರ್ಮಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.