ಹುಬ್ಬಳ್ಳಿ: ಇಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವವನ್ನು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಆಚರಿಸಿದರು. ಶಿವಾಜಿ ಆಚರಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಛತ್ರಪತಿ ಶಿವಾಜಿಯ ಹೋರಾಟದ ಬಗ್ಗೆ ತಿಳಿಸಿದರು. ನಂತರ ಮಾತನಾಡಿದ ಅವರು, ಹಿಂದೂ ಸಮಾಜ ಮತ್ತು ಧರ್ಮ ರಕ್ಷಣೆಗೆ ಛತ್ರಪತಿ ಶಿವಾಜಿ ಮಹಾರಾಜರು ಮಾಡಿದ ಹೋರಾಟ ಎಲ್ಲರಿಗೂ ಮಾದರಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ಮರಾಠ ಗಲ್ಲಿಯಲ್ಲಿ ಇಂದು ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಾಜಿ ಎಂಬ ಹೆಸರೇ ಇಂದಿನ ಯುವ ಜನತೆಗೆ ಆದರ್ಶಪ್ರಾಯ ಎಂದ ಸಚಿವರು, ಹಿಂದೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಐತಿಹಾಸಿಕ ವ್ಯಕ್ತಿತ್ವಗಳಲ್ಲಿ ಶಿವಾಜಿ ಮಹಾರಾಜರೂ ಒಬ್ಬರು ಎಂದು ಪ್ರತಿಪಾದಿಸಿದರು.
ಛತ್ರಪತಿ ಶಿವಾಜಿ ಅವರ ತ್ಯಾಗ-ಬಲಿದಾನ ಮತ್ತು ಹಿಂದೂ ಸಮಾಜ, ಧರ್ಮದ ರಕ್ಷಣೆಗಾಗಿ ಮಾಡಿದ ಹೋರಾಟಗಳು ಸ್ಮರಣೀಯವಾಗಿವೆ. ಅಲ್ಲದೇ, ಇಂದಿನ ದಿನಮಾನದಲ್ಲಿ ಸರ್ವರಿಗೂ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಚಿವರಾದ ಸಂತೋಷ್ ಲಾಡ್ ಹಾಗು ಮರಾಠಾ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.