ಹುಬ್ಬಳ್ಳಿ : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿಯೇ ಧಾರವಾಡ ಜಿಲ್ಲೆಯಲ್ಲಿ ಮಾಜಿ ಸಚಿವ ಮುನೇನಕೊಪ್ಪರವರ ಚರ್ಚೆಯ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ನವಲಗುಂದ ಮಾಜಿ ಶಾಸಕ ಶಂಕರ್ ಪಾಟೀಲ್ ಮುನೇನಕಪ್ಪರವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೋ ಅಥವಾ ಬಿಜೆಪಿಯಲ್ಲಿಯೇ ಉಳಿದುಕೊಳ್ಳುತ್ತಾರೋ ಎಂಬ ಚರ್ಚೆಯು ಈಗ ಧಾರವಾಡದಲ್ಲಿ ಸದ್ದು ಮಾಡುತ್ತಿದೆ.
ಕಾಂಗ್ರೆಸ್‌ನ ಹಾಲಿ ವಿಧಾನ ಪರುಷತ್ ಸದಸ್ಯರಾದ ಜಗದೀಶ ಶೆಟ್ಟರವರು ದೆಹಲಿ ಭೇಟಿ ಬಳಿಕ ಮುನೇನಕೊಪ್ಪರವರ ವಿಚಾರ ಧಾರವಾಡ ಜಿಲ್ಲೆಯ ರಾಜಕೀಯದಲ್ಲಿ ಬಹುದೊಡ್ಡ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ಜಗದೀಶ ಶೆಟ್ಟರ ಹಾಗೂ ಶಂಕರ ಪಾಟೀಲ್ ಮುನೇನಕೊಪ್ಪರವರಿಬ್ಬರು ಈ ಹಿಂದೆ ಒಂದೇ ಪಕ್ಷದಕ್ಷಲ್ಲಿದ್ದಾಗ ಗುರು ಶಿಷ್ಯರಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ವಿಧಾನ ಸಭೆಯ ಚುನಾವಣೆ ಸಂದರ್ಭದಲ್ಲಿ ಜಗದೀಶ ಶೆಟ್ಟರವರು ಬಿಜೆಪಿಯ ಕೆಲವು ನಾಯಕರನ್ನು ಕಾಂಗ್ರೆಸ್ ಕರೆದುಕೊಂಡು ಬಂದು ಬಿಜೆಪಿಗೆ ಸೇಡು ಹೊಡೆದಿದ್ದರು. ಅಂದೇ ಮುನೇನಕೊಪ್ಪರವರು ಕೂಡಾ ಬಿಜೆಪಿ ಬೀಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ನಂತರ ಮುನೇನಕೊಪ್ಪರವರು ಕಳೆದ 2023 ಅಗಷ್ಟನಲ್ಲಿ ಸುದ್ದಿಗೋಷ್ಠಿ ಕರೆದು ಬಿಜೆಪಿ ಬೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿ, ಜನವರಿ ನಂತರ ಕೆಲವು ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು. ಆದರೆ ಲೋಕ ಸಭಾ ಚುನಾವಣೆ ಹತ್ತಿರದಲ್ಲಿಯೇ ಈಗ ಮತ್ತೆ ಮುನೇನಕೊಪ್ಪರವರ ಪಕ್ಷಾಂತರ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಜಗದೀಶ ಶೆಟ್ಟರವರು ಕೂಡಾ ಈ ವಿಚಾರ ಬಗ್ಗೆ ನಾನು ಯಾವುದೇ ಸಂಪರ್ಕ ಮಾಡಿಲ್ಲವೆನ್ನತ್ತಲೇ ಬಂದಿದ್ದಾರೆ. ಇದಕ್ಕೆ ಈಗ ಅಂತಿಮವಾಗಿ ಮುನೇನಕೊಪ್ಪರವರೇ ಸ್ಪಷ್ಟತೆ ನೀಡಬೇಕಾಗಿದೆ.