Wednesday, April 30, 2025
29.2 C
Bengaluru
LIVE
ಮನೆರಾಜಕೀಯಪಾಕ್​ ಜಿಂದಾಬಾದ್ ಕೇಸ್​ : ಹುಸೇನ್​ ವಿರುದ್ಧ ಕ್ರಮಕ್ಕೆ ಶಾಸಕ ಟೆಂಗಿನಕಾಯಿ ಆಗ್ರಹ

ಪಾಕ್​ ಜಿಂದಾಬಾದ್ ಕೇಸ್​ : ಹುಸೇನ್​ ವಿರುದ್ಧ ಕ್ರಮಕ್ಕೆ ಶಾಸಕ ಟೆಂಗಿನಕಾಯಿ ಆಗ್ರಹ

ಹುಬ್ಬಳ್ಳಿ : ಶಕ್ತಿಸೌಧ, ವಿಧಾನಸೌಧದಲ್ಲಿಯೇ ಪಾಕಿಸ್ತಾನದ ಜಿಂದಾಬಾದ್ ಘೋಷಣೆ ಕೂಗು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ. ನಾಸೀರ್ ಹುಸೇನ್ ಅವರ ಹೆಸರನ್ನು ಸೇರಿಸಬೇಕು ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಒತ್ತಾಯಿಸಿದ್ದಾರೆ.

ನಾಸೀರ್ ಹುಸೇನ್ ಅವರ ವಿಜಯೋತ್ಸವದಲ್ಲಿ ಅವರ 25 ಬೆಂಬಲಿತರ ಟೀಂ ನಿಂದಲ್ಲೆ ಘೋಷಣೆ ಕೇಳಿ ಬಂದಿದೆ. ಈ ವಿವರವಾಗಿ ಮೂವರನ್ನು ಬಂಧನ ಮಾಡಲಾಗಿದ್ದು, ಆರೋಪಿತರ ತಪ್ಪು ಇದರಲ್ಲಿ ಎಷ್ಟು ಇದೆ. ಅಷ್ಟೇ ಪರೋಕ್ಷವಾಗಿ ಬೆಂಬಲ ನೀಡಿದವರದ್ದು ತಪ್ಪಾಗುತ್ತದೆ. ಹಾಗಾಗಿ ಈ ಪ್ರಕರಣದ ಎಫ್. ಐ.ಆರ್ .ನಲ್ಲಿ ನಾಸೀರ್ ಹೆಸರು ಸೇರಿಸಬೇಕು ಎಂದು ಅಗ್ರಹಿಸಿದರು.

ನಾಸೀರ್ ಅವರಿಗೆ ರಾಜ್ಯಸಭಾ ಸದಸ್ಯರಾಗಿ ಅಧಿಕಾರ ಸ್ವೀಕಾರಕ್ಕೆ ಅವಕಾಶ ನೀಡಬಾರದು. ಅಧಿವೇಶನ ನಡೆದಂತಹ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ಸಂದರ್ಭದಲ್ಲಿ ಮಾಧ್ಯಮಗಳು ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು. ಇದರ ಬಗ್ಗೆ ವಿಪಕ್ಷವಾಗಿ ನಾವು ಖಂಡಿಸಿ ವಿರೋಧ ಮಾಡಿದೀವಿ. ಆದರೇ ಆಡಳಿತ ಪಕ್ಷ ಆ ಘಟನೆಯ ಅಥವಾ ಅಂತಹ ಘೋಷಣೆಗಳನ್ನು ಕೂಗಿಲ್ಲ ಎಂದರು. ಈ ಎಫ್. ಎಸ್.ಎಲ್ ವರದಿ ಬಂದ ಮೇಲೆ ಸರ್ಕಾರ ಪೊಲೀಸ್ ಅಧಿಕಾರಿಗಳು ಘೋಷಣೆ ಕೂಗಿರುವುದು ನಿಜ ಅಂತಿದೆ.

ಅಲ್ಪಸಂಖ್ಯಾತರ ಓಲೈಕೆ ದೃಷ್ಟಿಯಿಂದ ಘಟನೆ ನಡೆದ ತಕ್ಷಣವೇ ಬಿ‌ ರಿಪೋರ್ಟ್ ರೆಡಿ ಮಾಡಿರುತ್ತದೆ. ಈ ಹಿಂದೆ ಹಲವಾರು ಘಟನೆಗಳು ಸಾಕ್ಷಿ ಇವೆ. ಅದಕ್ಕೆ ಹಳೇ ಹುಬ್ಬಳ್ಳಿ ಗಲಭೆ ಕೂಡಾ ನಿದರ್ಶನವಾಗಿದೆ. 2 ವರ್ಷಗಳಿಂದ ಆರೋಪಿಗಳು ಬಂಧನದಲ್ಲಿದ್ದರು‌ ಅವರ ಸರ್ಕಾರ ಬಂದ ಮೇಲೆ ಆರೋಪಿಗಳು ಈಗ ಹೊರ ಬಂದಿದ್ದಾರೆ. ಈಗಲೂ ಈ ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಈ ಪ್ರಕರಣವನ್ನು ಎನ್.ಐ.ಎ ಗೆ ನೀಡುವ ಮೂಲಕ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯ ಮಾಡಿದರು.

ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಸರ್ಕಾರ ಮಾಡಿದ್ದಲ್ಲಿ ಬಿಜೆಪಿ ಹೋರಾಟಕ್ಕೆ ಮುಂದಾಗುತ್ತದೆ. ನಾಸೀರ್ ಹುಸೇನ್ ವಿರುದ್ಧ ಸ್ಪೀಕರ್ ಅವರಿಗೆ ದೂರು ನೀಡುವ ಕುರಿತು ರಾಜ್ಯ ಬಿಜೆಪಿ ಕೋರ್ ಕಮೀಟಿ ನಿರ್ಣಯ ಮಾಡುತ್ತದೆ. ಬಿಜೆಪಿ ಸರ್ಕಾರ ಇದ್ದಾಗಲೂ ಬಾಂಬ್ ಬ್ಲಾಸ್ಟ್ ನಡೆದಿವೆ ಎಂಬ ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಲಾಡ್ ಅವರು ನಮ್ಮ ಅಧಿಕಾರ ಅವಧಿಯಲ್ಲಿ ಎಲ್ಲೆಲ್ಲಿ ಬ್ಲಾಸ್ಟ್ ಆಗಿವೆ ಹೇಳಬೇಕು. ನಾವೇನೂ ಲಾಡ್ ಅವರಿಗೆ ಹೇಳಬೇಡಿ ಅಂದಿಲ್ಲಾ. ಬ್ಲಾಸ್ಟ್ ಗಳು ನಡೆದಿದ್ರೆ ಯಾರಿಗೂ ಕಣ್ಣಿಗೆ ಕಾಣದ ಹಾಗೆ ನಡೆದಿರುವುದಿಲ್ಲ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯೇ ಅವರಿಗೆ ವಿಷವಾಗಿ ಕಾಡುತ್ತಿದೆ ಎಂದು ಟೀಕಿಸಿದರು.

ಅಭಿವೃದ್ಧಿಗೆ ಇನ್ನೊಂದು ಹೆಸರೇ ಬಿಜೆಪಿ ಕೇಂದ್ರದಲ್ಲಿ ನಮ್ಮ ಹತ್ತು ವರ್ಷದ ಬಿಜೆಪಿ ಆಡಳಿತ ನೋಡಿದ್ರೆ ಗೊತ್ತಾಗುತ್ತದೆ. ಹಿಂದಿನ ಯುಪಿಎ ಹಾಗೂ ಹತ್ತು ವರ್ಷದ ಬಿಜೆಪಿ ಆಡಳಿತ ಅವಧಿ ಅಭಿವೃದ್ಧಿ ಕುರಿತು ಬೇಕಾದಲ್ಲಿ ಡಿಬೆಟ್ ಮಾಡೋಣ. ಒಂದೇ ಭಾರತ ಟ್ರೈನ್ ಉತ್ತಮವಾದ ಹೆದ್ದಾರಿ ನೀಡಿದ್ದು ಬಿಜೆಪಿ. ವಿಮಾನ ನಿಲ್ದಾಣ, ಐಐಟಿ, ಟ್ರಿಪಲ್ ಐಟಿ, ಮೆಡಿಕಲ್ ಕಾಲೇಜ್ ಸಂಖ್ಯೆ ಎಷ್ಟು ಎಂದು ನೋಡಿದ್ರೆ ಗೊತ್ತಾಗುತ್ತದೆ ಎಂದ ಅವರು ಭಾರತದ ಅಭಿವೃದ್ಧಿ ವೇಗವನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ ಎಂದು‌ ತಿಳಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments