ಹುಬ್ಬಳ್ಳಿ : ಇತ್ತೀಚೆಗೆ ಮಾಜಿ ಸಿಎಂ ಜಗದೀಶ ಶೆಟ್ಟರವರು ಕಾಂಗ್ರೆಸ್‌ನೊಂದಿಗಿನ ಸಂಬಂಧಕ್ಕೆ ಕೈ ಕೊಟ್ಟು ಕಮದ ಕೈ ಹಿಡಿದಿದ್ದು, ಆದರೆ ಸ್ಥಳೀಯ ಮಟ್ಟದ ಸಿಟ್ಟು ಈಗ ಬ್ಯಾನರ್‌ನಲ್ಲಿ ಹೊರ ಬಂದಿದೆ. ಹೌದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ರಾಜ್ಯಾಧ್ಯಕ್ಷ ಬಿ ವೈ ವಿಜೆಯೇಂದ್ರ ಹಾಗೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಅಧಿಕೃತವಾಗಿ ಬಿಜೆಪಿಗೆ ಸೇರಿದರು. ನಂತರ ದೆಹಲಿಯಿಂದ ಬೆಂಗಳೂರಿಗೆ ಬಂದು ಶೆಟ್ಟರವರು ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ, ಎರಡು ದಿನದ ಬಳಿಕ ತವರು ಹುಬ್ಬಳ್ಳಿಗೆ ಆಗಮಿಸಿದ್ದು, ಆದರೆ ಸ್ಥಳೀಯ ಮಟ್ಟದ ಭಿನ್ನಾಭಿಪ್ರಾಯ ಹಸಿರಾಗಿದೆ ಎಂಬುವುದನ್ನು ಶೆಟ್ಟರ್ ಸ್ವಾಗತದ ಬ್ಯಾನರ್ಗಳು ಎತ್ತಿತೋರಿದವು.
ಕುಸುಗಲ್ ರಸ್ತೆ ಸೇರಿದಂತೆ ಜಗದೀಶ ಶೆಟ್ಟರ್ ನಿವಾಸ ಬಳಿ ಅಳವಡಿಸಲಾದ ಬ್ಯಾನರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡ, ರಾಜ್ಯಧ್ಯಕ್ಷ ಬಿವೈವಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪೋಟೋಗಳ ಮಾತ್ರ ರಾರಾಜಿಸುತ್ತಿವೆ. ಜೊತೆಗೆ ಮನೆಯ ಮುಂಭಾಗದಲ್ಲಿಯು ಪ್ರಧಾನಿ ಮೋದಿ, ಜಗದೀಶ ಶೆಟ್ಟರ್ ಹಾಗೂ ಪುತ್ರ ಸಂಕಲ್ಪ ಶೆಟ್ಟರ ಪೋಟೋ ಜೊತೆಗೆ ಶೆಟ್ಟರ್ ಬೆಂಬಲಿತರ ಭಾಚಿತ್ರಗಳು ಕಾಣುತ್ತಿವೆ. ಸದ್ಯ ಜೋಶಿ ಹಾಗೂ ಶೆಟ್ಟರ ನಡುವೆ ಮುನ್ನಿಸು ಈಗಾಗಲೇ ಜಗತ್ತ ಜಾಹಿರಾಗಿದ್ದು, ಈಗ ಶೆಟ್ಟರ್ ಸ್ವಾಗತದ ಬ್ಯಾನರಗಳಲ್ಲಿಯು ಸ್ಥಳೀಯ ಮುನ್ನಿಸು ಎತ್ತಿತೋರುತ್ತಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಸೇರಿ ಶಾಸಕರುಗಳಾದ ಮಹೇಶ ತೆಂಗಿನಕಾಯಿ, ಎಂ ಆರ್ ಪಾಟೀಲ ಅವರ ಪೋಟೋಗಳಿಗೆ ಶೆಟ್ಟರ್ ಸ್ವಾಗತ್ ಬ್ಯಾನರನಲ್ಲಿ ಕೋಕ್ ಕೋಡಲಾಗಿದ್ದು, ಇದೂ ಬಿಜೆಪಿಯಲ್ಲಿನ ಒಳ ಸಿಟ್ಟನ್ನು ಶೆಟ್ಟರ್ ಬ್ಯಾನರ್‌ನಲ್ಲಿಯು ಹೊರಹಾಕಿದ್ದಾರೆ ಎಂಬ ಮಾತುಗಳು ಈಗ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.