ಹುಬ್ಬಳ್ಳಿ : ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ನಾಸೀರ ಹುಸೇನ್ ಅವರಿಗೆ ದೇಶ ಭಕ್ತಿ ಇದಿದ್ದರೆ ಅಂದೇ ದೇಶ ವಿರೋಧಿ ಘೋಷಣೆ ಕೂಗಿದವನ ಕಪ್ಪಾಳಕ್ಕೆ ಹೊಡಿತ್ತಿದ್ದರು ಎಂದು ರಾಜ್ಯ ಸಭಾ ಸದಸ್ಯ ನಾಸೀರ ಹುಸೇನ್ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿಕಾರಿದರು.
ನಾಸೀರ ಹುಸೇನ್ ವಿಜಯೋತ್ಸವದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಂದಿದೆ. ಅದೂ ಶಕ್ತಿ ಸೌಧದಲ್ಲಿ ನಾಸೀರ್ ಹುಸೇನ್ ಬೆಂಬಲಿಗರೆ ಮಾಡಿದ್ದರು. ಆದನ್ನು ನಾವು ಕೂಡಾ ಖಂಡಿಸಿದ್ವಿ, ಮಾಧ್ಯಮ ಕೂಡ ಎಲ್ಲವನ್ನು ತೋರಿಸಿದ್ವು. ಆದರೆ ನಾಸೀರ ಹುಸೇನ ಮಾತ್ರಾ ಈ ಘೋಷಣೆ ಕೂಗಿಯೇ ಇಲ್ಲಾ ಅಂದಿದ್ರೂ. ಜೊತೆಗೆ ಇದರ ಬಗ್ಗೆ ಪ್ರಶ್ನೆ ಮಾಡಲು ಹೋಗಿದ್ದ ಪತ್ರಕರ್ತರನ್ನು ಕೀಳುಮಟ್ಟದಲ್ಲಿ ಮಾತಾಡಿ ಕಳಿಸಿದ್ದರು. ಈ ಘಟನೆಯ ನಂತರ ಕಾಂಗ್ರೆಸ್ ನಾಯಕರು ಯಾರೂ ಕೂಡಾ ಪಾಕಿಸ್ತಾನ ಜಿಂದಾಬಾದ್ಗೆ ಖಂಡನೆ ಮಾಡಲಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಇನ್ನೂ ಪರಿಷತ್‌ನಲ್ಲಿ ಲಾ ಮಿನಿಸ್ಟರ್ ಹೆಚ್ ಕೆ ಪಾಟೀಲ್ ಆ ರೀತಿ ಘೋಷಣೆ ಕೂಗಿಯೇ ಇಲ್ಲ ಅಂದಿದ್ದಾರೆ. ಕಾಂಗ್ರೆಸ್ ನಾಯಕರು ಅಲ್ಪ ಸಂಖ್ಯಾತ ಓಟ್ ಬ್ಯಾಂಕ್ಗಾಗಿ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ನಿಜವಾಗಿಯೂ ದೇಶ ಭಕ್ತಿ ಇದ್ದಿದ್ದರೆ, ಈ ಘಟನೆ ಖಂಡಿಸಿ ತನಿಖೆ ನಡೆಸುತ್ತಿದ್ದರು ಎಂದು ಹೇಳಿದರು.
ವಿಧಿ ವಿಜ್ಞಾನ ಪ್ರಯೋಗಾಲಯ ಖಾಸಗಿ ತಜ್ಞ ಘೋಷಣೆ ಕೂಗಿರುವುದು ನಿಜ ಅಂದಿದ್ದಾರೆ. ಆದರೆ ಸರ್ಕಾರ ಮಾತ್ರ ಇನ್ನೂ ವರದಿಗಾಗಿ ಕಾಯುತ್ತಿದ್ದೇವೆ ಎನ್ನುತ್ತಾರೆ. ನ್ನೊಂದು ಕಡೆ ಘೋಷಣೆಯೇ ಕೂಗಿಲ್ಲಾ ಅಂದಿದ್ದರೂ. ಈಗ ಏಕಾಏಕಿ ಕೆಲವರನ್ನು ಬಂಧನ ಮಾಡಿದ್ದಾರೆ. ಸರ್ಕಾರಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೈ ಸೇರಿಲ್ಲ ಅಂತ್ತಾರೆ. ಹಾಗಿದ್ದಲ್ಲಿ ಬಂಧನ ಮಾಡಿದ್ದು ಯಾಕೆ..? ಎಂದು ಪ್ರಶ್ನಸಿದರು. ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಕನ್ಫೂಸ್‌ನಲ್ಲಿದೆ. ಓಟ್ ಬ್ಯಾಂಕಿಗಾಗಿ ಯಾವ ಮಟ್ಟಕ್ಕೆ ಬೇಕಾದರೂ ನಾವೂ ಹೊಗುತ್ತೇವೆ ಅನ್ನುವುದು ಇಲ್ಲಿ ಫ್ರೂ ಆಗಿದೆ ಎಂದು ಕಾಂಗ್ರೆಸ್ ನಾಯಕರನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ್ರು.