ರಾಜಕೀಯರಾಜ್ಯಸುದ್ದಿ

ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ತಿಪ್ಪನ ಮಜ್ಜಗಿ ನೇಮಕ

ಹುಬ್ಬಳ್ಳಿ : ತೀವ್ರ ಕುತೂಹಲ ಮೂಡಿಸಿ ಹುಬ್ಬಳ್ಳಿ‌ ಧಾರವಾಡ ಮಹಾನಗರ ಬಿಜೆಪಿ‌ ಜಿಲ್ಲಾಧ್ಯಕ್ಷರ‌ ಆಯ್ಕೆಗೆ ಕೊನೆಗೂ ತೆರೆಬಿದಿದ್ದು, ನೂತನ ಜಿಲ್ಲಾಧ್ಯಕ್ಷರಾಗಿ ಹು-ಧಾ ಮಾಹಾನಗರ ಪಾಲಿಕೆಯ‌ ವಾರ್ಡ ನಂ 38ರ ಸದಸ್ಯರಾದ ತಿಪ್ಪಣ್ಣಾ ಮಜ್ಜಗಿ ಹಾಗೂ ಗ್ರಾಮಾಂತರ ಅಧ್ಯಕ್ಷರಾಗಿ ನಿಂಗಪ್ಪ‌ ಸುತ್ತಗಟ್ಟಿಯವರನ್ನು ಆಯ್ಕೆ ಮಾಡಿ ಬಿಜೆಪಿ‌‌ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅದೇಶ ಹೊರಡಿಸಿದ್ದಾರೆ.

ಈ ಹಿಂದೆ ಜಿಲ್ಲಾಧ್ಯಕ್ಷ ಸ್ಥಾನವು ಧಾರವಾಡದ ಸಂಜಯ ಕಪಟಕರ್ ಪಾಲಾಗಿತ್ತು.‌ ಪ್ರಸ್ತುತ ಈ ಬಾರಿ ಅವಳಿನಗರ ಜಿಲ್ಲಾ ಅಧ್ಯಕ್ಷ ಸ್ಥಾನವು ಹುಬ್ಬಳ್ಳಿ ಪಾಲಾಗಿದೆ. ಇನ್ನೂ ಗ್ರಾಮಂತರ ಅಧ್ಯಕ್ಷ ಸ್ಥಾನವು ಧಾರವಾಡದ ಕಲಘಟಗಿ ಪಾಲಾಗಿದೆ. ಇನ್ನೂ ಜಿಲ್ಲಾಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ಈ ಹಿಂದಿನ ಗ್ರಾಮಾಂತರ ಅಧ್ಯಕ್ಷ ಬಸವರಾಜ ಕುಂದಗೋಳಮಠ ಅವರಿಗೆ ಈಗ ನಿರಾಶೆ ಮೂಡಿಸಿದೆ.‌ ಹುಬ್ಬಳ್ಳಿ‌ ಧಾರವಾಡ ಮಾಹಾನಗರ ಜಿಲ್ಲಾ ಬಿಜೆಪಿಗೆ ನೂತನ ಸಾರಥಿಗಳ‌ ಆಯ್ಕೆಯಾಗಿದ್ದು, ಈಗ ಅವಳಿನಗರದಲ್ಲಿ‌ ನೂತನ ಅಧ್ಯಕ್ಷರು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಪುಲ್ ಬ್ಯೂಸಿಯಾಗಿದ್ದಾರೆ.‌

Comments (0)

Your email address will not be published. Required fields are marked *

Back to top button