ಹುಬ್ಬಳ್ಳಿ : ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಪ್ರಭು ಶ್ರೀ ಬಾಲ ರಾಮನ ಪ್ರಾಣ ಪ್ರತಿಷ್ಠಾನವನ್ನು ಪ್ರಧಾನ ನರೇಂದ್ರ ಮೋದಿಯವರು ನೇರವೇರಿಸಿದ್ದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿಂದು ಬಿಜೆಪಿ ಕಾರ್ಯಕರ್ತರು ಪ್ರಧಾನಿಯವರಿಗೆ ಅಭಿನಂದನಾ ಪತ್ರ ಬರೆಯುವ ಮೂಲಕ ಅಭಿನಂದನಾ ಪತ್ರ ಅಭಿಯಾನ ಕೈಗೊಂಡರು.
ನಗರದ ಮೂರು ಸಾವಿರ ಮಠದಲ್ಲಿ ಪ್ರಧಾನಿಗಳಿಗೆ ಅಭಿನಂದನಾ ಪತ್ರ ಅಭಿಯಾನ ಕಾರ್ಯಕ್ರಮ ನಡೆಯಿತು. ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮಿಗಳು ಪತ್ರ ಬರೆಯುವುದರ ಮೂಲಕ ಪತ್ರ ಅಭಿಯಾನಕ್ಕೆ ಚಾಲನೆ ನೀಡಿದರು. ಹು-ಧಾ ಮಾಹಾನಗರ ಬಿಜೆಪಿ ಜಿಲ್ಲಾ ಅಧ್ಯಕ್ಷ ತಿಪ್ಪಣ ಮಜ್ಜಗಿ ಅಧ್ಯಕ್ಷತೆಯಲ್ಲಿ ಅಭಿನಂದನಾ ಪತ್ರ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಸಾಂಕೇತವಾಗಿ ನೂರಕ್ಕೂ ಹೆಚ್ಚು ಪತ್ರಗಳನ್ನು ಬರೆಯಲಾಯಿತು. ಇನ್ನೂ ಈ ಸಂದರ್ಭದಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರು ಜೈ ಶ್ರೀರಾಮ ಜೈ ಜೈ ಶ್ರೀರಾಮ ಘೋಷಣೆ ಕೂಗಿದರು. ಅಸಂಖ್ಯಾತ ಹಿಂದುಗಳ ಕನಸಾಗಿದ್ದ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠಾನ ಈಗ ನೇರವೇರಿದ್ದು, ಅದೂ ಪ್ರಧಾನಿಗಳು ಪ್ರಾಣ ಪ್ರತಿಷ್ಠಾನ ಮಾಡಿದ್ದಾರೆ. ಸುಮಾರು ಐದು ಶತಮಾನಗಳಿಂದ ಈ ಕಾರ್ಯಕ್ಕೆ ಸರ್ವ ಶ್ರೀ ರಾಮನ ಭಕ್ತರು ಎದುರು ನೋಡುತ್ತಿದ್ದರು. ಆ ಕನಸು ಈಗ ನೀಜಾವಾಗಿದೆ. ಹಾಗಾಗಿ ಅಭಿನಂದನಾ ಪತ್ರದ ಮೂಲಕ ಅಭಿಯಾನ ನಡೆಸಲಾಗುತ್ತಿದೆ. ಇದೊಂದು ಉತ್ತಮ ಕಾರ್ಯವೆಂದು ಅಭಿಪ್ರಾಯ ಹಂಚಿಕೊಂಡರು.