ಹುಬ್ಬಳ್ಳಿ : ಸಿದ್ದರಾಮಯ್ಯ ಸುಳ್ಳು ಹೇಳೋದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಈ ಮೊದಲು NDRF ಫಂಡ್ ನಲ್ಲಿ ಇಷ್ಟು ಪ್ರಮಾಣದ ಹಣ ನೀಡುತ್ತಿರಲಿಲ್ಲ. ನಾವು ಅಡ್ವಾನ್ಸ್ ಹಣ ಕೊಡ್ತೀದ್ದೇವೆ. ಯಡಿಯೂರಪ್ಪ ಅದೇ ಹಣವನ್ನು ಬರಗಾಲ ಬಂದಾಗ ಹಂಚಿಕೆ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಆರ್ಥಿಕ ದುಸ್ಥಿತಿ ತಂದು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ನಾವು ಒಂದೇ ಒಂದು ರೂಪಾಯಿ GST ಹಣ ಕೊಡೋದು ಬಾಕಿ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, NDRF ನಲ್ಲಿ ನಾವು 12 ಸಾವಿರ ಕೋಟಿ ಕೊಟ್ಟಿದ್ದೇವೆ. ಡೆವಲೂಷನ್ ಫಂಡ್ ಅವರ ಕಾಲದಲ್ಲಿ 60 ಸಾವಿರ ಕೋಟಿ. ನಮ್ಮ ಕಾಲದಲ್ಲಿ 2 ಲಕ್ಷ 36 ಸಾವಿರ ಕೋಟಿ ಕೊಟ್ಟಿದ್ದೇವೆ. ತೆರಿಗೆ ಹಂಚಿಕೆಯಲ್ಲಿ 10 ವರ್ಷದಲ್ಲಿ 81 ಸಾವಿರ ಕೋಟಿ, ನಮ್ಮ ಕಾಲದಲ್ಲಿ 2 ಲಕ್ಷ 85 ಸಾವಿರ ಕೋಟಿ ಕೊಟ್ಟಿದ್ದೇವೆ. ಇವರು ಯಾವುದೇ ಗ್ರಾಂಟ್ ಕೊಟ್ಟಿಲ್ಲ ಅಂತಿದ್ದಾರೆ. ನಾವು ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ. 2004 ರಿಂದ 2014 ರಲ್ಲಿ 1667 ಕೋಟಿ ಬಿಡುಗಡೆಯಾಗಿತ್ತು. ಸಿದ್ದರಾಮಯ್ಯ ಸುಳ್ಳುರಾಮಯ್ಯ. ನಾನು ನಿನ್ನೆಯಿಂದ ಸಿದ್ದರಾಮಯ್ಯರನ್ನ ಸುಳ್ಳುರಾಮಯ್ಯ ಎಂದು ಕರೆಯುತ್ತಿದ್ದೇನೆ.
ಮಹದಾಯಿ ವಿಚಾರ ಅರಣ್ಯ ಇಲಾಖೆ ನಿರಾಕರಣೆ ಮಾಡಿಲ್ಲ ಎಂದ ಕೇಂದ್ರ ಸಚಿವರು, ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಕೃಷಿ ಸಚಿವರು ಅವರ ಜೊತೆ ಮಾತುಕತೆ ಮಾಡ್ತಿದ್ದಾರೆ. ರೈತರ ಹೊಸ ಬೇಡಿಕೆ ಇಟ್ಟಿದ್ದಾರೆ. ನಮ್ಮ ಬೇಡಿಕೆ ಪರಿಶೀಲನೆ ಮಾಡ್ತಿದ್ದಾರೆ. ನಮ್ಮ ಸರ್ಕಾರ ಸಹಾನುಭೂತಿಯಿಂದ ಎಲ್ಲ ಬೇಡಿಕೆ ಪರಿಶೀಲನೆ ಮಾಡುತ್ತಿದ್ದಾರೆ. ಕಲ್ಲು ಹೊಡೆಯೋದು ಕೆಲಸವಲ್ಲ. ರೈತರು ಮಾತುಕತೆಗೆ ಬರಬೇಕು. ನಾವು ಪ್ರತಿಭಟನೆಯನ್ನು ಹತ್ತಿಕ್ಕೋ ಕೆಲಸ ಮಾಡುತ್ತಿಲ್ಲ. ಅನುಮತಿ ಇಲ್ಲದೆ ಬಂದವರನ್ನು ತಡೆಯೋ ಕೆಲಸ ಆಗ್ತಿದೆ. ನಮ್ಮ ದೇಶದ ಪ್ರಜೆಗಳನ್ನು ಉಳಿಯೋ ಕೆಲಸ ಆಗ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.