ವಿಜಯನಗರ : ವಿಶ್ವವಿಖ್ಯಾತ ಹಂಪಿ ಉತ್ಸವದಲ್ಲಿ ಹೆಚ್ಚಿನ ಜನರನ್ನು ಸೇರಿಸುವ ಸವಾಲಿನೊಂದಿಗೆ ಜಿಲ್ಲಾಡಳಿತ ವಿಭಿನ್ನ ರೀತಿಯ ಕಸರತ್ತು ನಡೆಸುತ್ತಿದೆ. ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಉತ್ಸವಕ್ಕೆ ಜಿಲ್ಲಾಡಳಿತದಿಂದ ಫೈನಲ್ ತಯಾರಿ ನಡೆದಿದೆ.
ಈ ಹಿನ್ನೆಲೆ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಪ್ರೀಡಂ ಟಿವಿ ಜೊತೆ ಹಂಪಿ ಉತ್ಸವದ ಬಗ್ಗೆ ಮಾಹಿತಿ ನೀಡಿದ್ದು, ಹಂಪಿ ಉತ್ಸವಕ್ಕೆ ಜನರನ್ನು ಕರೆತರಲು ಉತ್ಸವದ ದಿನ ಹೊಸಪೇಟೆಯಿಂದ ಹಂಪಿಗೆ ನೂರು ಬಸ್ಗಳು ಉಚಿತವಾಗಿ ಸಂಚರಿಸಲಿವೆ. ತಾಲೂಕು ಕೇಂದ್ರಗಳು ಹಾಗೂ ಹೊಸಪೇಟೆ ತಾಲೂಕಿನ ನಾನಾ ಹಳ್ಳಿಗಳಿಂದ ಬಸ್ಗಳು ಸಂಚರಿಸಲಿವೆ ಎಂದರು. ಸಿನಿತಾರೆಯರಿಂದ ಹಂಪಿ ಉತ್ಸವಕ್ಕೆ ಇನ್ನಷ್ಟು ಮೆರಗು ಸಿಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.