ಬಿಜೆಪಿ ಸೇರ್ಪಡೆಯ ಬಳಿಕ ಮೊದಲ ಬಾರಿಗೆ ಜನಾರ್ದನ ರೆಡ್ಡಿ ಗಂಗಾವತಿಗೆ ಆಗಮಿಸಿದ್ದರು. ಜನಾರ್ದನ ರೆಡ್ಡಿಗೆ ಬಿಜೆಪಿ ನಾಯಕರಿಂದ ಹಾರ ಹಾಕಿ, ಕೇಸರಿ ಶಾಲು ಹೊದಿಸಿ ರೆಡ್ಡಿಗೆ ಸ್ವಾಗತ ನೀಡಲಾಯಿತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನೆಯಲ್ಲಿ ಬಿಜೆಪಿ ನಾಯಕರ ಜೊತೆ ರೆಡ್ಡಿ ಮಾತುಕಥೆ ನಡೆಸಿದ್ರು. ರೆಡ್ಡಿಗೆ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವತ್ತೂರು.ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗುರು, ಎಮ್ ಎಲ್ ಸಿ ಹೇಮಲತಾ ನಾಯಕ, ಸ್ವಾಗತ ಕೋರಿದರು.
ಬಿಜೆಪಿ ಅಭ್ಯರ್ಥಿ ಪರವಾಗಿ ಇಂದಿನಿಂದ ಅಧಿಕೃತ ಪ್ರಚಾರ ನಡೆಸಲಿರುವ ಜನಾರ್ದನ ರೆಡ್ಡಿ ಜೊತೆ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಬಾಗಿಯಾಗಲಿದ್ದಾರೆ.