ರಾಜಕೀಯರಾಜ್ಯಸುದ್ದಿ

ಕಾಂಗ್ರೆಸ್ ಪಕ್ಷ ಇದೀಗ ಮನೆಯೊಂದು ಎರಡು ಬಾಗಿಲು

ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷ ಇದೀಗ ಮನೆಯೊಂದು ಎರಡು ಬಾಗಿಲು ಆದಂತಾಗಿದೆ. ಕೊಪ್ಪಳ ತಾಲೂಕಿನ‌ ಒಣಬಳ್ಳಾರಿ ಗ್ರಾಮದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಅಹ್ವಾನಿಸದೆ, ಕಾಂಗ್ರೆಸ್ ಪೂರ್ವಭಾವಿ ಸಭೆ ಮಾಡಲಾಗಿದೆ. ಇಕ್ಬಾಲ್ ಅನ್ಸಾರಿ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಚಿವ. ಸಭೆಯಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಎಂ ಎಲ್ ಸಿ ಎಚ್ ಆರ್ ಶ್ರೀನಾಥ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶಾಮೀದ್ ಮನಿಯಾರ್, ಕಾಂಗ್ರೆಸ್ ಮುಖಂಡ ಹನುಮಂತ ಅರಸನಕೇರಿ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ನೂರಾರು ಮುಖಂಡರು ಭಾಗಿ ಭಾಗಿಯಾಗಿದ್ದರು.

ಇಕ್ಬಾಲ್ ಅನ್ಸಾರಿ ಸದ್ಯ ರಾಜಶೇಖರ್ ಹಿಟ್ನಾಳ್ ವಿರುದ್ಧ ಅಸಮಧಾನಗೊಂಡಿದ್ದಾರೆ. ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್, ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್ ಇಕ್ಬಾಲ್ ಅನ್ಸಾರಿ ಮನೆಗೆ ಭೇಟಿ ನೀಡಿದ್ರು ಕೂಡ ಮನಸ್ಸು ಬದಲಿಸದೆ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದು, ಬಿಗಿಪಟ್ಟು ಹಿಡಿದಿದ್ದಾರೆ.
ಈ ಹಿನ್ನಲೆಯಲ್ಲಿ ಇಕ್ಬಾಲ್ ಅನ್ಸಾರಿ ವಿರೋಧಿ ಬಣ, ತೀವ್ರ ಕುತೂಹಲ ಕೆರಳಿಸಿದೆ.

Comments (0)

Your email address will not be published. Required fields are marked *

Back to top button