ಫ್ರೀಡಂ ಟಿವಿಯ ಮತ್ತೊಂದು ವರದಿ ಸರ್ಕಾರದ ಕಣ್ಣು ತೆರೆಸಿದೆ. ಬಿಡಿಎಯಲ್ಲಿ ನಿವೃತ್ತ ಗುತ್ತಿಗೆ
ನೌಕರರ ರಾಜ್ಯಭಾರದ ಬಗ್ಗೆ ಪ್ರಕಟವಾಗಿದ್ದ ವರದಿಗೆ ಸರ್ಕಾರ ಸ್ಪಂದಿಸಿದೆ. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಮಹತ್ವದ ಆದೇಶವನ್ನು ಹೊರಡಿಸಿದ್ದು, ನಿವೃತ್ತ ಗುತ್ತಿಗೆ ನೌಕರರನ್ನು ಕೂಡಲೇ ಮನೆಗೆ ಕಳುಹಿಸುವಂತೆ ಆದೇಶ ಮಾಡಿದ್ದಾರೆ. ಬಿಡಿಎಯಲ್ಲಿ ಸುಬ್ಬರಾವ್ ಎಂಬ ವ್ಯಕ್ತಿ ಕಮಿಷನರ್ ಕಚೇರಿಯಲ್ಲೇ ಅಂಧಾದರ್ಬಾರ್ ನಡೆಸುತ್ತಿದ್ದ ಬಗ್ಗೆ ಫ್ರೀಡಂ ಟಿವಿ ವರದಿ ಮಾಡಿತ್ತು.
ಹೊಸ ಆದೇಶದಲ್ಲಿ ಬಿಡಿಎ, ಬಿಡಬ್ಲುಎಸ್ ಎಸ್ ಬಿ, ನಮ್ಮ ಮೆಟ್ರೋ , BIAPPA, KUDFC, ಪೌರಾಡಳಿತ ನಿರ್ದೇಶನಾಲಯ, ಭೂಸಾರಿಗೆ ಇಲಾಖೆ, ನಗರ-ಗ್ರಾಮಾಂತರ ಯೋಜನಾ ಇಲಾಖೆಯ ಮುಖ್ಯಸ್ಥರಿಗೆ ಕೂಡಲೇ ನಿವೃತ್ತರನ್ನು ಗುತ್ತಿಗೆ ಮೇಲೆ ಇರುವವರನ್ನು ಕೂಡಲೇ ರಿಲೀವ್ ಮಾಡಿ ಆ ಹುದ್ದೆಗಳಿಗೆ ಸರ್ಕಾರಿ ನೌಕರರನ್ನು ನಿಯೋಜಿಸಿ ವರದಿ ನೀಡಬೇಕೆಂದು ಆದೇಶಿಸಲಾಗಿದೆ.