Wednesday, April 30, 2025
24 C
Bengaluru
LIVE
ಮನೆರಾಜಕೀಯಅನಂತಕುಮಾರ ಹೆಗಡೆ ಜನರ ಸಮಸ್ಯೆಯತ್ತ ಗಮನಹರಿಸಲಿ: ಶಾಸಕ ಬೆಲ್ಲದ

ಅನಂತಕುಮಾರ ಹೆಗಡೆ ಜನರ ಸಮಸ್ಯೆಯತ್ತ ಗಮನಹರಿಸಲಿ: ಶಾಸಕ ಬೆಲ್ಲದ

ಧಾರವಾಡ: ಸಂಸದ ಅನಂತಕುಮಾರ ಹೆಗಡೆ ಅವರು ಜನರ ಸಮಸ್ಯೆ ಹಾಗೂ ತೊಂದರೆ ಕಡೆಗೆ ಗಮನಹರಿಸಬೇಕು. ಅದನ್ನು ಬಿಟ್ಟು ಸಂಬಂಧ ಹಾಗೂ ಸೂತ್ರವಿಲ್ಲದೇ ಮಾತನಾಡಬಾರದು ಇದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಸೆಕ್ಯುಲರ್ ಎಂಬ ಪದವನ್ನು ಸಂವಿಧಾನದಿಂದ ತೆಗೆಯಬೇಕು ಎಂದು ಹೆಗಡೆ ಹೇಳಿದ್ದಾರೆ. ಇದು ಅನಾವಶ್ಯಕ. ಈ ಸಂದರ್ಭದಲ್ಲಿ ಇದನ್ನು ಮಾತನಾಡಬಾರದು. ಈ ರೀತಿ ಅನಾವಶ್ಯಕವಾಗಿ ಹೇಳಿಕೆ ಕೊಡಬಾರದು. ಅವರು ಕ್ಷಮೆ ಕೇಳಬೇಕು ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಹ್ಲಾದ ಜೋಶಿ ಅವರಿಗೇ ಸಿಗಲಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಧಾರವಾಡ ಲೋಕಸಭಾ ಟಿಕೆಟ್ ಪ್ರಹ್ಲಾದ ಜೋಶಿ ಅವರಿಗೇ ಸಿಗಲಿದೆ. ಉಳಿದ ಕಡೆಯ ಟಿಕೆಟ್ ವರಿಷ್ಠರು ತೀರ್ಮಾನ ಮಾಡುತ್ತಾರೆ. ಪಕ್ಷದಲ್ಲಿ ದುಡಿದ ಹಿರಿಯರನ್ನು ಮಾತನಾಡಿಸಿ ಜನರ ಸರ್ವೆ ಕೂಡ ಮಾಡಲಾಗಿದೆ. ಆ ವರದಿ ಮೇಲೆ ಪಕ್ಷದ ತೀರ್ಮಾನವಿದೆ. ನಾನು ದೆಹಲಿಗೆ ಹೋಗಿದ್ದು ಇದೇ ವಿಚಾರಕ್ಕೆ ಎಂದರು.

ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಇಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬೆಲ್ಲದ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments