ನವದೆಹಲಿ: ಯೂಟ್ಯೂಬ್’ಗೆ ಅಪ್‌ಲೋಡ್ ಮಾಡುವ ವಿಡಿಯೋಗಳ ಪಾರದರ್ಶಕತೆ ಬಗ್ಗೆ ತಿಳಿಯಲು ಅವುಗಳು ನೈಜ ವಿಡಿಯೊಗಳೇ ಅಥವಾ AI ತಂತ್ರಜ್ಞಾನ ಬಳಸಿ ಮಾಡಲಾಗಿದೆಯೇ ಎಂಬ ಬಗ್ಗೆ ವಿಡಿಯೋ ಪ್ರೊಡ್ಯೂಸರ್ ಕಡ್ಡಾಯವಾಗಿ ಅವುಗಳ ಮೇಲೆ ಲೇಬಲ್ ಪ್ರದರ್ಶಿಸಬೇಕಿದೆ ಎಂದು ಗೂಗಲ್ ಒಡೆತನದ ಯೂಟ್ಯೂಬ್ ಸೂಚಿಸಿದೆ.
ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವ ವಿಡಿಯೊಗಳ ಪಾರದರ್ಶಕತೆ ಬಗ್ಗೆ ತಿಳಿಯಲು ಬಳಕೆದಾರರು ಇಚ್ಛಿಸುತ್ತಾರೆ. ಹಾಗಾಗಿ, ಅವುಗಳ ನೈಜತೆ ಕುರಿತು ತಿಳಿಸುವುದೇ ಈ ಹೊಸ ಮಾನದಂಡದ ಮೂಲ ಉದ್ದೇಶವಾಗಿದೆ ಎಂದು ಹೇಳಿದೆ.
ಪ್ರಸ್ತುತ ಯೂಟ್ಯೂಬ್’ನ ಕ್ರಿಯೇಟರ್ ಸ್ಟುಡಿಯೋದಲ್ಲಿ ಹೊಸ ಟೂಲ್ ಪರಿಚಯಿಸಲಾಗಿದೆ. ವಿಡಿಯೋಗಳಲ್ಲಿ ಇರುವ ವಿಷಯದ ನೈಜತೆ, ನೈಜ ವ್ಯಕ್ತಿ, ಸ್ಥಳ, ದೃಶ್ಯ ಅಥವಾ ಕಾರ್ಯಕ್ರಮಗಳ ಬಗೆಗಿನ ಮಾಹಿತಿಯನ್ನು ಅವುಗಳ ತಯಾರಕರು, ವೀಕ್ಷಕರಿಗೆ ಬಹಿರಂಗಪಡಿಸಬೇಕಿದೆ. ಅನಿಮೇಟೆಡ್, ಎ.ಐ ತಂತ್ರಜ್ಞಾನ ಬಳಸಿ ವಿಡಿಯೋ ಸೃಷ್ಟಿಸುವವರು ನಮಗೆ ಅಗತ್ಯವಿಲ್ಲ ಎಂದಿದೆ.