ಕ್ರಿಕೆಟ್ಸುದ್ದಿ

CSK ವಿರುದ್ದದ ಪಂದ್ಯದಲ್ಲಿ ಇತಿಹಾಸ ಬರೆಯೋದು ಫಿಕ್ಸ್….!?

ದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ ನ 2024ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಮಾರ್ಚ್ 22 ರಂದು ಚೆನ್ನೈನ ಐಕಾನಿಕ್ ಎಂಸಿ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್​ಸಿಬಿ ತಂಡದಲ್ಲಿ ಹಾಲಿ ಚಾಂಪಿಯನ್ ಸಿಎಸ್​ಕೆ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.

ಉಭಯ ತಂಡದ ಹೈವೋಲ್ಟಜ್ ಪಂದ್ಯವನ್ನು ನೋಡೋದಕ್ಕೆ ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತಾ ಅದೇ ಪಂದ್ಯದಲ್ಲಿ ಕೊಹ್ಲಿ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ. ಐಪಿಎಲ್‌ನ ಇತಿಹಾಸದಲ್ಲಿ ಒಂದೇ ತಂಡಕ್ಕಾಗಿ ಇದುವರೆಗೆ ಎಲ್ಲಾ 16 ಲೀಗ್‌ಗಳನ್ನು ಆಡಿದ ಏಕೈಕ ಆಟಗಾರ ಕೊಹ್ಲಿ.
ಸದ್ಯಕ್ಕೆ ಕೊಹ್ಲಿ ಟಿ20 ಮಾದರಿಯಲ್ಲಿ ಒಟ್ಟು 11994 ರನ್‌ಗಳನ್ನು ಗಳಿಸಿದ್ದಾರೆ. 2024ರ ಐಪಿಎಲ್‌ ನಲ್ಲಿ ವಿರಾಟ್ ಕೊಹ್ಲಿ ಕೇವಲ 6 ರನ್ ಗಳಿಸಿದರೆ 12,000 ರನ್ ಗಡಿ ದಾಟುತ್ತಾರೆ. ಈ ಮೂಲಕ ಟಿ20 ಮಾದರಿಯಲ್ಲಿ 12 ಸಾವಿರ ರನ್ ಕಲೆಹಾಕಿದ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬ್ಯಾಟ‌ರ್ ಎಂಬ ಹೆಗ್ಗಳಿಕೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ ಪೈಕಿಯಲ್ಲಿ ವಿರಾಟ್ ಕೊಹ್ಲಿ 11994 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ 11156 ರನ್ ಗಳಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ.

Comments (0)

Your email address will not be published. Required fields are marked *

Back to top button