ನವದೆಹಲಿ : ವಾಯುಪಡೆಯ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ (ನಿವೃತ್ತ) ಆರ್‌ಕೆಎಸ್ ಭದೌರಿಯಾ ಅವರು ಸಶಸ್ತ್ರ ಪಡೆಗಳಲ್ಲಿನ ಹುದ್ದೆಯಿಂದ ನಿವೃತ್ತಿ ಹೊಂದಿ ಸುಮಾರು 2 ವರ್ಷಗಳ ನಂತರ ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಆರ್‌ಕೆಎಸ್ ಭದೌರಿಯಾ ಅವರು 23ನೇ ವಾಯುಸೇನೆಯ ಮುಖ್ಯಸ್ಥರ ಹುದ್ದೆಯನ್ನು ಸೆಪ್ಟೆಂಬರ್ 30, 2019 ರಿಂದ ಸೆಪ್ಟೆಂಬರ್ 30, 2021 ರವರೆಗೆ ಹೊಂದಿದ್ದಾರೆ. ಅವರು ಆಗ್ರಾ ಜಿಲ್ಲೆಯ ಬಹ್ ತಹಸಿಲ್‌ನ ನಿವಾಸಿಯಾಗಿದ್ದಾರೆ. ಮೂಲಗಳ ಪ್ರಕಾರ ಬಿಜೆಪಿ ಅವರನ್ನು ಗಾಜಿಯಾಬಾದ್‌ನಿಂದ ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಬಹುದು.