ದಾವಣಗೆರೆ : ಇದು ದಾವಣಗೆರೆ ಜಿಲ್ಲಾಸ್ಪತ್ರೆಯ ಕರ್ಮಕಾಂಡದ ವರದಿ. ಇಲ್ಲಿ ರೋಗಿಗಳು ಜೀವ ಕೈಯಲ್ಲಿಡಿದುಕೊಂಡು ವಾರ್ಡ್ ನಲ್ಲಿ ಮಲಗಬೇಕಾದ ಸ್ಥಿತಿ ಎದುರಾಗಿದೆ. ಅವ್ಯವಸ್ಥೆಗಳ ಆಗರವಾಗಿರುವ ರೋಗಿಗಳಿಗೆ ಚಿಕಿತ್ಸೆ ಮರೀಚಿಕೆಯಾಗಿದ್ರೆ, ಚಿಕಿತ್ಸೆ ಪಡೆಯೋಕೆ ಬಂದು ಮತ್ತೊಂದು ಖಾಯಿಲೆಗೆ ತುತ್ತಾಗುವ ಭಯ ಎದುರಾಗಿದೆ.
ಹೌದು ಇಲ್ಲಿನ ವಾರ್ಡ್ ಗಳ ದುಸ್ತಿತಿಯನ್ನ ನೋಡಿದ್ರೆ, ಯಾವಾಗ ಮೇಲ್ಛಾವಣಿ ಕುಸಿರು ರೋಗಿಗಳ ಮೇಲೆ ಬೀಳುತ್ತವೋ ಎಂಬಂತಹ ವಾತಾವರಣವಿದೆ. ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯ 71 ಮತ್ತು 72ನೇ ವಾರ್ಡಿನಲ್ಲಿ ರೋಗಿಗಳು ಜೀವ ಕೈಯಲ್ಲಿಡಿದುಕೊಂಡು ಮಲಗುತ್ತಿದ್ರು. ದುರಂತ ಅಂದ್ರೆ, ನಿನ್ನೆ ತಡರಾತ್ರಿ ವಾರ್ಡಿನ ಮೇಲ್ಛಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.
ರೋಗಿಗಳು ಮಲಗಿದ್ದಾಗ ಏಕಾಏಕಿ ಮೇಲ್ಛಾವಣಿ ಕುಸಿದು ಬಿದ್ದಿದೆ. ಅಸ್ತಿಪಂಜರದಂತಾಗಿರುವ ಜಿಲ್ಲಾಸ್ಪತ್ರೆ ಬಗ್ಗೆ ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಜಿಲ್ಲಾಡಳಿತಕ್ಕೆ ಗೊತ್ತಿದ್ರು, ಅದ್ಯಾಕೋ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ.