ಉತ್ತರದ ಬೆಳಗಾವಿಯಿಂದ ಹಿಡಿದು ದಕ್ಷಿಣದ ಚಾಮರಾಜನಗರದವರೆಗಿನ ಜನಕ್ಕೆ ವಾಟಳ್ ನಾಗರಾಜ್ ಚಿರಪರಿಚಿತರು. 40ದಶಕಗಳ ಕಾಲ ಕನ್ನಡ ನಾಡು, ನುಡಿ ಭಾಷೆ, ಜಲ ವಿಚಾರಗಳಿಗೆ ಯಾವುದೇ ಸರ್ಕಾರವಿರಲಿ ಯಾವುದೇ ವ್ಯಕ್ತಿ ಇರಲಿ ಯಾರನ್ನು ಲೆಕ್ಕಿಸದ ಒಬ್ಬ ಹೋರಾಟಗಾರನೆಂದರೆ ಅದು ಇವರೇ. ಕೇವಲ ಹೋರಾಟಕ್ಕೆ ಸೀಮಿತವಾಗಿದ್ದ ವಾಟಾಳ್ ನಾಗರಾಜ್ ರವರು ಸಡನ್ನಾಗಿ ಕನ್ನಡ ಚಿತ್ರ ಒಂದರಲ್ಲಿ ನಟನೆ ಮಾಡಿದ್ದಾರೆ,
ಮಠ , “ಎದ್ದೇಳು ಮಂಜುನಾಥ” ಇಂತಹ ಕಲಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿದ ಹೆಸರಾಂತ ನಿರ್ದೇಶಕ
ಗುರುಪ್ರಸಾದ್ ರವರ “ರಂಗ ನಾಯಕ ” ಸಿನಿಮಾದಲ್ಲಿ ನಟಿಸಿದ್ದಾರೆ. ಹೌದು ವೀಕ್ಷಕರೆ ಇದನ್ನು ಖುದ್ದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ನಾವುಗಳು ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿಲ್ಲ. ಆದರೆ ನಮ್ಮವರೇ ಆದ ವಾಟಾಳ್ ನಾಗರಾಜ್ ರವರನ್ನು ನೋಡಿದ್ದೇನೆ. ಅವರ ಮಾತಿನ ದಾಟಿ, ಹೋರಾಟಕ್ಕೆ ಬಳಸುವ ಸಾಧನಗಳನ್ನು ಕಂಡರೆ ಇವರನ್ನು ಗಿನ್ನಿಸ್ ರೆಕಾರ್ಡ್ ಪುಸ್ತಕಕ್ಕೆ ಸೇರಿಸಬೇಕು ಎಂದೆನಿಸುತ್ತದೆ.
ಗುರುಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ ರವರು ಕೂಡಿ ಮಾಡುತ್ತಿರುವ “ರಂಗ ನಾಯಕ”
ಸಿನಿಮಾದಲ್ಲಿ ವಾಟಾಳ್ ನಾಗರಾಜ್ ರವರನ್ನು ನಟನೆ ಮಾಡಲು ಕೇಳಿಕೊಂಡರು, ಆದರೆ ಕೆಲವೊಂದು ಕಾರಣಗಳಿಂದ ವಾಟಾಳ್ ನಾಗರಾಜ್ ರವರು ಸಿನಿಮಾದಲ್ಲಿ ಪಾತ್ರ ಮಾಡಲು ಆಗಲಿಲ್ಲ, ಅದರೆ
ಈ ಸಿನಿಮಾದಲ್ಲಿ ಗೌರವಪೂರ್ವಕವಾಗಿ ಅವರ ಹೆಸರನ್ನು ಬಳಸಿಕೊಂಡಿದ್ದೆವೆ. ವಾಟಾಳ್ ನಾಗರಾಜ್ ಅವರನ್ನು ಪ್ರತಿನಿಧಿಸಲಾಗಿದೆ. ದುರಂತ ಅಂದರೆ, ಈ ಹಾಡಿನಲ್ಲಿ ವಾಟಾಳ್ ನಾಗರಾಜ್ ಪಾತ್ರದಲ್ಲಿ ನಟಿಸಿದ ವ್ಯಕ್ತಿ ಈಗ ಬದುಕಿಲ್ಲ.
ವಾಟಾಳ್ ನಾಗರಾಜ್ ಪಾತ್ರಧಾರಿಯ ಬಗ್ಗೆ ಹೇಳುವುದಕ್ಕೂ ಮುನ್ನ ಈ ಹಾಡಿಗೆ ವಾಟಾಳ್ ಯಾಕೆ ಬಂದ್ರು? ಅನ್ನೋದನ್ನು ತಿಳಿದುಕೊಳ್ಳುವುದು ಮುಖ್ಯ. ಕನ್ನಡ ಹಾಡಿನಲ್ಲಿ ವಾಟಾಳ್ ನಾಗರಾಜ್ ಬಗ್ಗೆ ಹೇಳಲೇ ಬೇಕು ಅಂತ ನಿರ್ದೇಶಕ ಗುರುಪ್ರಸಾದ್ ನಿರ್ಧರಿಸಿದ್ದರು. ಹಾಗಾಗಿ ವಾಟಾಳ್ ನಾಗರಾಜ್ ಅವರ ಬಗ್ಗೆ ಹಾಡಿನಲ್ಲಿ ಕೆಲವು ಸಾಲುಗಳನ್ನು ಬರೆದಿದ್ದರು.
ವಾಟಾಳ್ ನಾಗರಾಜ್ ರವರು ಬಳಸುವ “ಬಂದ್ ಬಂದ್ ಬಂದ್” ಅಂತ ಮೂರು ಬಾರಿ , ಈ ಹಾಡಿನಲ್ಲಿ ನಟಿಸುವಂತೆ ವಾಟಾಳ್ ಅವರಲ್ಲಿ ಮನವಿ ಕೂಡ ಮಾಡಿಕೊಂಡಿದ್ದರು. ಆದರೆ, ಹಲವು ಕಾರಣಗಳಿಗೆ ಅವರು ಒಪ್ಪಿರಲ್ಲ. ಆ ಮೇಲೆ ಅದೇ ತರಹದ ಒಬ್ಬ ತದ್ರೂಪಿಯನ್ನು ಹುಡುಕಿ ಅವರ ಹತ್ತಿರ ಮಾಡಿಸಿಕೊಂಡಿದ್ದರು ನಿರ್ದೇಶಕ ಗುರುಪ್ರಸಾದ್. ಅದರೆ ವಾಟಾಳ್ ನಾಗರಾಜ್ ಪಾತ್ರ ಮಾಡಿದ್ದ ವ್ಯಕ್ತಿ ಈಗ ಬದುಕಿಲ್ಲ ಅನ್ನೋ ನೋವಿನ ವಿಷಯವನ್ನು ಹಂಚಿಕೊಂಡಿದ್ದಾರೆ. “ಆ ವ್ಯಕ್ತಿ ಸತ್ತೂ ಹೋದ. ಈ ಹಾಡಿನಲ್ಲಿ ಪಾತ್ರ ಮಾಡಿದ್ದಾರಲ್ಲ ಅವರು ಇಲ್ಲ. ಕೊರೊನಾ ಸಮಯದಲ್ಲಿ ಕಳೆದುಕೊಂಡೆವು.” ಎಂದು ಗುರುಪ್ರಸಾದ್ ಹೇಳಿದ್ದಾರೆ.