ಸಿನಿಮಾಸುದ್ದಿ

ಕಾರು ಬರೋದು ಲೇಟಾಯ್ತು: ಪತ್ನಿ ಜೊತೆ ಆಟೋ ಏರಿದ ನಟ ಶ್ರೀಮುರುಳಿ

ಬೆಂಗಳೂರು: ಕಾರ್ ಲೇಟಾಯ್ತು ಎಂದು ಸ್ಟಾರ್‌ ನಟ ಶ್ರೀಮುರಳಿ ದಂಪತಿ ಆಟೋದಲ್ಲಿ ಮನೆಗೆ ಹೋಗಿರುವುದು ಕಂಡುಬಂದಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಪತ್ನಿ ವಿದ್ಯಾ ಅವರು ನಗರದಲ್ಲಿ ಸೋಮವಾರ ಆಟೋ ಸವಾರಿ ಮಾಡಿದ್ದು, ಆಟೋ ಪ್ರಯಾಣದ ವಿಡಿಯೊವನ್ನು ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ ಬರೋದು ಲೇಟ್ ಆಗುತ್ತೆ ಅಂತ ಹಾಗೇ ಆಟೋಲೆ ಹೋಗೊಣ ಅನ್ಕೊಂಡ್ವಿ (ನನ್ನ ಐಡಿಯಾ)… ಆಟೋ ಸಿಗದೇ ನಡೆದು ನಡೆದು ಸಾಕಾಗಿತ್ತು (ನನ್ನ ಹೆಂಡತಿಗೆ ಕೋಪಾನು ಸ್ಟಾರ್ಟ್ ಆಗುತ್ತಿತ್ತು..) ಆಗ ನನ್ನ ಆಪತ್ಭಾದವರಂತೇ ಇಬ್ಬರು ಹುಡುಗರು ನಮ್ಮನ್ನು ನೋಡಿ ಸಾಕಾಗಿ, ಆಟೋ ಹಿಡಿದು ನಮ್ಮ ಬಳಿ ತಂದರು, ಅವರಿಗೆ ಧನ್ಯವಾದ… ಆಟೋ ಅಣ್ಣ ನಮ್ಮನ್ನು ಮನೆಗೆ ಸುರಕ್ಷಿತವಾಗಿ ಡ್ರಾಪ್ ಮಾಡಿದರು ಎಂದು ನಟ ಶ್ರೀಮುರಳಿ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button