Wednesday, April 30, 2025
35.6 C
Bengaluru
LIVE
ಮನೆರಾಜ್ಯ2ದಿನದಿಂದ ಮನೆಯಲ್ಲೇ ರಾಕಿಂಗ್ ಸ್ಟಾರ್ ಯಶ್..!

2ದಿನದಿಂದ ಮನೆಯಲ್ಲೇ ರಾಕಿಂಗ್ ಸ್ಟಾರ್ ಯಶ್..!

ಹುಟ್ಟುಹಬ್ಬದ ದಿನವೇ ನಡೆದ ಆ ಕಹಿ ಘಟನೆಗಳು ಕೆಜಿಎಫ್ ಖ್ಯಾತಿಯ ರಾಕಿ ಭಾಯ್ ಜಂಘಾಬಲವನ್ನೇ ಹುದುಗಿಸಿವೆ.. ಅನಾಮತ್ತು ನಾಲ್ಕು ಮಂದಿ ಅಭಿಮಾನಿಗಳ ದುರಂತ ಸಾವು ಅವರನ್ನ ಇನ್ನಿಲ್ಲದಂತೆ ಶೋಕದ ಕಡಲಿಗೆ ನೂಕಿವೆ.. ಹೀಗಾಗಿ ಅವರು ಸಾಕಷ್ಟು ಬೇಸರದಲ್ಲಿದ್ದಾರೆ.

 

ಯಶ್ ನಿಕಟವರ್ತಿಗಳಿಂದ ಗೊತ್ತಾದ ವಿಚಾರ ಅಂದ್ರೆ ಯಶ್ ಎರಡು ದಿನಗಳಿಂದ ಮನೆಯಿಂದ ಹೊರ ಬಂದಿಲ್ಲವಂತೆ..ಇನ್ನು ಹೊಸ ಸಿನಿಮಾ ಟಾಕ್ಸಿಕ್ ಸೇರಿದಂತೆ ಇನ್ನು ಅನೇಕ ಪ್ರಾಜೆಕ್ಟ್ ವಿಚಾರವಾಗಿಯೂ ಮಾತುಕತೆ ನಡೆಸೋದಾಗಲಿ, ಸ್ನೇಹಿತರು, ಬಂಧುಬಳಗದವರ ಭೇಟಿಯನ್ನಾಗಲಿ ಮಾಡಿಲ್ಲ..ಮನೆಯೊಳಗೆ ಮೌನಿಯಾಗಿದ್ದಾರೆ ಎಂದೇಳಲಾಗುತ್ತಿದೆ.

ಯಶ್ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ಧೈವ..ಜನವರಿ ಎಂಟನೇ ತಾರೀಕು ಅವರ ಹುಟ್ಟುಹಬ್ಬ..ಕಳೆದ ನಾಲ್ಕು ವರ್ಷಗಳಿಂದ, ಕೋವಿಡ್ ಮತ್ತು ಸಿನಿಮಾ ಬ್ಯುಸಿ ಶೆಡ್ಯೂಲ್ ನಿಂದಾಗಿ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳೋಕೆ ಸಾಧ್ಯವಾಗಿಲ್ಲ..ಹೀಗಾಗಿ ಅವರು ಅಭಿಮಾನಿಗಳ ಬಳಿ ಕ್ಷಮೆಯನ್ನೂ ಯಾಚಿಸಿದ್ರು.. ಇನ್ನು ಕರೀನಾ ಕಪೂರ್ ಜೊತೆ ನಟಿಸುತ್ತಿರುವ ಬಿಗ್ ಬಜೆಟ್ ಮೂವಿ ಟಾಕ್ಸಿಕ್ ಸಿನಿಮಾದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಹುಟ್ಟು ಹಬ್ಬದ ದಿನ ಕೂಡ ಅವರು ಕುಟುಂಬದ ಜೊತೆ ಗೋವಾದಲ್ಲಿದ್ದರು. ಇದೇ ವೇಳೆ ಅವರ ಕಿವಿಗೆ ಬಂದು ಅಪ್ಪಳಿಸಿದ್ದು, ಗದಗದ ಸೊರಣಗಿ ಗ್ರಾಮದಲ್ಲಿ ಮೂವರು ಅಭಿಮಾನಿಗಳು ಬ್ಯಾನರ್ ಕಟ್ಟುವಾಗ ಮೃತಪಟ್ಟ ಸುದ್ದಿ..

ಗದ್ಗದಿತರಾಗಿಯೇ ಗದಗಕ್ಕೆ ಬಂದ ಯಶ್ ಮೃತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿ ಕುಟುಂಬಕ್ಕೆ ನೆರವಾಗುವ ಮಾತು ಆಡಿ ಹೋಗಿದ್ರು..ಈ ರೀತಿ ಅಲ್ಲಿಂದ ಹೋಗುವಾಗಲೇ ಮತ್ತೊಬ್ಬ ಅಭಿಮಾನಿ ಅಪಘಾತದಲ್ಲಿ ಮೃತಪಟ್ಟಿದ್ದ..ಈ ಎಲ್ಲವೂ ಅವರ ಮನಸ್ಸನ್ನ ಆಳವಾಗಿ ಭಾದಿಸಿವೆ.. ಹೀಗಾಗಿ ಅವರು ಎರಡು ದಿನಗಳಿಂದ ಮೌನಕ್ಕೆ ಶರಣಾಗಿದ್ದಾರೆ. ಮನೆಯಿಂದ ಹೊರ ಬಂದಿಲ್ಲ..ನಡೆದ ಕಹಿ ಘಟನೆಗಳನ್ನ ಮರೆತು ಯಶ್ ಉತ್ತಮ ಸಿನಿಮಾಗಳನ್ನ ಕೊಡುವತ್ತ ಬ್ಯುಸಿಯಾಗಲಿ ಅನ್ನೋದೇ ಎಲ್ಲರ ಬಯಕೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments