ಸ್ಯಾಂಡಲ್ವುಡ್ ಸಿಂಡ್ರೇಲಾ ರಾಧಿಕಾ ಪಂಡಿತ್ಗೆ ಮಾರ್ಚ್ 7 ತುಂಬಾನೆ ಸ್ಪೆಷಲ್ ಡೇ ಆಗಿರುತ್ತದೆ. ಪ್ರತಿ ವರ್ಷ ಈ ದಿನವನ್ನ ತುಂಬಾನೆ ಎಂಜಾಯ್ ಮಾಡುತ್ತಾರೆ. ಪ್ರತಿ ವರ್ಷ ಮಾರ್ಚ್ 7ರಂದು ರಾಧಿಕಾ ಮನೆಗೆ ಸಾಕಷ್ಟು ಅಭಿಮಾನಿಗಳು ಬರ್ತಾರೆ. ಯಾಕಂದ್ರೆ ಸ್ಯಾಂಡಲ್ವುಡ್ನ ಸಂತೂರ್ ಮಮ್ಮಿಯ ಬರ್ತ್ಡೇ ಸೆಲೆಬ್ರೆಷನ್ ಮಾಡೋಕೆ. ಹೌದು.. ಈಗ ನಟಿ ರಾಧಿಕಾ ಪಂಡಿತ್ 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ನಟಿ ತಮ್ಮ ಜನ್ಮ ದಿನವನ್ನ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡ್ತಾ ಬಂದಿದ್ದಾರೆ. ಜೊತೆಗೆ ಬರ್ತ್ಡೇ ದಿನದಂದು ಮನೆಗೆ ಬರೋ ಫ್ಯಾನ್ಸ್ ಜೊತೆಗೆ ಫೋಟೋ ಸೆಷನ್ ಕೂಡ ಇರ್ತಾ ಇತ್ತು. ಪ್ರತಿ ವರ್ಷದಂತೆ ಈ ವರ್ಷವೂ ಬರ್ತ್ ಡೇ ಸೆಲೆಬ್ರೇಷನ್ ಇದ್ದೇ ಇರುತ್ತದೆ. ಆದರೆ ಅದು ಹೇಗಿರುತ್ತದೆ ಅನ್ನೋದನ್ನ ರಾಧಿಕಾ ಹೇಳಿಕೊಂಡಿಲ್ಲ.