ಹಂಪಿ ಉತ್ಸವ ವೀಕ್ಷಿಸಲು ಎರಡನೇ ದಿನವು ಜನಸಾಗರವೇ ಹರಿದುಬಂದಿತ್ತು. ಇದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್. 5 ವರ್ಷಗಳ ಹಿಂದೆ ಕೂಡ ದರ್ಶನ್ ಹಂಪಿ ಉತ್ಸವಕ್ಕೆ ಪಾಲ್ಗೊಂಡಿದ್ದರು. ಹಂಪಿ ಉತ್ಸವದಲ್ಲಿ ಡಿ ಬಾಸ್ ಹವಾ ಜೋರಾಗಿದ್ದು, ವೇದಿಕೆಯಲ್ಲಿ ಮಾಸ್ ಡೈಲಾಗ್ ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಬಹಳ ಬ್ಯುಸಿ ಇದ್ದರೂ ಎಲ್ಲಾ ಕೆಲಸ ಕಾರ್ಯ ಬಿಟ್ಟು ಹಂಪಿ ಉತ್ಸವಕ್ಕೆ ಹಾಜರಾಗ್ತೀನಿ. ಹಂಪಿ ನಮ್ಮ ಕರ್ನಾಟಕದ ಗತ ವೈಭವ “ಕೃಷ್ಣದೇವರಾಯ ಆಳಿದ ನಾಡು ಕೃಷ್ಣದೇವರಾಯ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ ಎಲ್ಲರೂ ಈ ನಾಡಿಗಾಗಿ ಹೋರಾಡಿದವರು.
ಹಂಪಿ ಉತ್ಸವಕ್ಕೆ ನನ್ನನ್ನು ಕರೆದಿರುವುದು ನನ್ನ ಪುಣ್ಯ ” ಮೈಸೂರು ದಸರಾ, ಹಂಪಿ ಉತ್ಸವ ಬಹಳ ಸಡಗರ ಸಂಭ್ರಮದಿಂದ ನಡೆಯುತ್ತದೆ. ವಿಜಯನಗರ ಉಸ್ತುವಾರಿ ಸಚಿವರು ಜಮೀರ್ ಬಾಯ್ ಕರೆದಿದ್ದರು. ಜಮೀರ್ ಅಹಮದ್ ರವರು ನನ್ನನ್ನು ಬಾಸ್ ಅಂತಾರೇ ನಾನು ಅವರನ್ನು ಭಾಯ್ ಎನ್ನುತ್ತೀನಿ”” ನಾನು ಯಾರ ಬಳಿಯೂ ಅಷ್ಟು ಬೇಗ ಸೋಲಲ್ಲ.
ನಾನು ಕೆಲವರ ಬಗ್ಗೆ ತುಂಬಾ ಲೆಕ್ಕ ಹಾಕುತ್ತೇನೆ. ಒಳಗೆ ಬರುತ್ತಿದ್ದಂತೆ ನೀವು ಅಲ್ಲೇ ಇರಿ, ನಾನು ಇಲ್ಲೇ ಇರ್ತೀನಿ ಅಂದು ಬೀಡುತ್ತಿನಿ. ಯಾಕಂದರೆ ನಮ್ಮದು ಏಕ್ ಮಾರ್ ಧೋ ತುಕ್ಡಾ, ತುಂಬಾ ಖಡಕ್ ಆಗಿರುತ್ತೆ. ಇಷ್ಟ ಆದರೆ ತುಂಬಾ ಇಷ್ಟದಿಂದ ಹೇಳ್ತೀವಿ. ಕಷ್ಟ ಆದ್ರೆ ದೂರ ಇದ್ದು ಬಿಡಪ್ಪ ಎಂದು ಬಿಡ್ತೀವಿ.”
“ನನಗೆ ಜಮೀರ್ ಮೇಲೆ ಅಷ್ಟು ಪ್ರೀತಿ ಏಕೆ ಅಂದ್ರೆ ಇವತ್ತಿನವರೆಗೂ ತಮಗಾಗಿ ಯಾವುದೇ ಕಾರ್ಯಕ್ರಮಕ್ಕೂ ನನ್ನನ್ನು ಕರೆಯಲಿಲ್ಲ. ಇದನ್ನು ಇವತ್ತು ಪಬ್ಲಿಕ್ ಆಗಿ ಹೇಳಬೇಕು.
ಪ್ರೀತಿಪಾತ್ರರ ಕಾರ್ಯಕ್ರಮಗಳಿಗೆ ಕರೆದಿದ್ದಾರೆ. ಆಪ್ತರ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕರೆದು ಹೋಗಿದ್ದೆ. ಚುನಾವಣೆ ಸಮಯದಲ್ಲಿ ಕೇಳ್ದೆ. ಪ್ರಚಾರಕ್ಕೆ ಬರಬೇಕಾ? ಅಂತ. ಬರಬೇಡ ಅಂದ್ರು. ಅವತ್ತೇ ಗೊತ್ತಾಯ್ತು, ಅವರು ಅದಕ್ಕೋಸ್ಕರ ನನ್ನ ಜೊತೆಗಿಲ್ಲ ಅಂತ” “ನಾವು ತುಂಬಾ ಜನರ ಪರ ಪ್ರಚಾರ ಮಾಡಿದ್ದೀವಿ. ಅವ್ರು ಗೆದ್ದಮೇಲೆ, ಸೋತಮೇಲೆ ನಮ್ಮನ್ನು ತಿರುಗಿಯೂ ನೋಡಿಲ್ಲ.