ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ಫೂರ್ತಿಯೊಂದಿಗೆ ಚಲನಚಿತ್ರವೊಂದು ಇದೇ ಮಾರ್ಚ್ 1ಕ್ಕೆ ತೆರೆ ಮೇಲೆ ಬರಲು ಸಿದ್ಧವಾಗಿದೆ. “ನಮೋ ಮೋದಿ” ಎಂಬ ಹೆಸರಿನ ಚಿತ್ರವನ್ನು ರಂಗಾಯಣ ನಿರ್ದೇಶಕರಾಗಿದ್ದ ರಮೇಶ್ ಪರವೀನಾಯ್ಕರ್ ಪರದೆಯ ಮೇಲೆ ತರುತ್ತಿದ್ದು, ಚಿತ್ರಕಥೆ, ನಿರ್ದೇಶನ, ನಿರ್ಮಾಣ ಈ ಎಲ್ಲದರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಚಿತ್ರದ ಟೀಸರ್, ಹಾಡುಗಳನ್ನು ಬೆಂಗಳೂರಿನ ಮಲ್ಲೇಶ್ವರಂ ಎಸ್‌ಆರ್‌ವಿ ಪ್ರೀವಿವ್ ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲಾಯಿತು.
ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಸಾಹಿತಿ ದೊಡ್ಡರಂಗೇಗೌಡ, ಹಿರಿಯ ನಟಿ, ನಟಿ ಸುಷ್ಮಾರಾಜ್ ಸೇರಿದಂತೆ ಮತ್ತಿತರರ ತಾರಾಗಣವಿದೆ. ಟೀಸರ್ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರೊ.ರಂಗೇಗೌಡ ಮಾತನಾಡಿ, ನಮೋ ಭಾರತ್ ಅಪ್ಪಟ ದೇಶಪ್ರೇಮದ ಕಥೆಯಾಗಿದ್ದು, ರೈತನೇ ಚಿತ್ರದಲ್ಲಿ ನಿಜವಾದ ನಾಯಕ. ಹಳ್ಳಿಯ ತಂದೆಗೆ ಸಾಕ್ಷಿಭೂತ ರೈತ. ಕೌಟುಂಬಿಕ ನೆಲೆಯಲ್ಲಿ ಗ್ರಾಮದ ಸಮಸ್ಯೆಗಳ ಸೈನಿಕನ ಸಂಘರ್ಷದ ಚಿತ್ರವಿದು ಎಂದರು.
ಮೊದಲ ಬಾರಿಗೆ ನಿರ್ದೇಶನ ಹೊಣೆ ಹೊತ್ತಿರುವ ರಮೇಶ್ ಪರವೀನಾಯ್ಕರ್ ನಟನಾಗಿದ್ದು, ಚಿತ್ರವನ್ನು ಅಪ್ಪಟ ದೇಶಪ್ರೇಮ ಸೈನಿಕನ ಹೋರಾಟ ಕೇಂದ್ರದ ಯೋಜನೆಗಳನ್ನು ಗ್ರಾಮಕ್ಕೆ ಮುಟ್ಟಿಸುವ ಕಥೆಯಿದಾಗಿದೆ. ಕಾಶ್ಮೀರದಲ್ಲಿ ಇಬ್ಬರನ್ನು ಗುಂಡೇಟಿಗೆ ಕಳೆದುಕೊಂಡಿದ್ದು ಬಹಳ ನೋವಾಗಿದೆ. ಚಿತ್ರರಂಗಕ್ಕೆ ಬಂದು ಚಿತ್ರವನ್ನು ನೋಡುವಂತೆ ಮನವಿ ಮಾಡಿದರು.
ಪತ್ರಕರ್ತ ಶಂಕರ್ ಪಾಗೋಜಿ ಮಾತನಾಡಿ, ಎಲ್ಲರೂ ನೋಡಲೇಬೇಕಾದ ಚಿತ್ರ ಇದಾಗಿದೆ. ಸೈನಿಕನ ಹೋರಾಟವನ್ನು ಬಹಳ ಮನೋಜ್ಞವಾಗಿ ತೋರಿಸಲಾಗಿದೆ ಎಂದರು. ನೈಜ ಘಟನೆಯನ್ನ ಆಧಾರಿತ ಚಿತ್ರ ಇದಾಗಿದ್ದು, ಕಾಶ್ಮೀರ, ಅಂಜನಾದ್ರಿಬೆಟ್ಟ, ಕೊಪ್ಪಳ ಸೇರಿದಂತೆ ಇನ್ನೂ ಕೆಲವೆಡೆ ಚಿತ್ರೀಕರಣ ಮಾಡಲಾಗಿದೆ. 48 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, 2019ರಲ್ಲಿ ಆರಂಭವಾಗಿದ್ದ ಚಿತ್ರೀಕರಣ, ಕೋವಿಡ್ ಮಹಾಮಾರಿಯ ಕಾರಣ ತಡವಾಗಿ ಈಗ ಬಿಡುಗಡೆಯಾಗುತ್ತಿದೆ. 125ಥಿಯೇಟರ್‌ಗಳಲ್ಲಿ ಮಾರ್ಚ್ 1ಕ್ಕೆ ನಮೋಭಾರತ್ ಬಿಡುಗಡೆಯಾಗಲಿದೆ.
ಕಾರ್ಯಕ್ರಮದಲ್ಲಿ ಹಿರಿಯ ನಟಿ ಭವ್ಯಾ,ನಟಿ ಸುಷ್ಮಾರಾಜ್ ಸಹ ನಿರ್ದೇಶಕ ಬಿ.ರಾಜರತ್ನಂ,ಲಹರಿ ವೇಲು ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.