ಚಿತ್ರದುರ್ಗ : ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಚಿತ್ರದುರ್ಗದ ಲೋಕಸಭಾ ಟಿಕೆಟ್ ಮಾಜಿ ಸಂಸದ ಬಿ.ಎನ್ ಚಂದ್ರಪ್ಪಗೆ ನೀಡಿದ್ದಕ್ಕೆ ಸ್ಥಳೀಯ ಆಕಾಂಕ್ಷಿಗಳಿಗೆ ಈ ಬಾರಿ ಟಿಕೆಟ್ ನೀಡುವಂತೆ ಡಾ. ತಿಪ್ಪೆಸ್ವಾಮಿ ಆಗ್ರಹಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಜಿಲ್ಲೆಯ ಅಭ್ಯರ್ಥಿಗಳು ನಿಂತಿದ್ರು. ಆದರೆ ಎಂಪಿ ಎಲೆಕ್ಷನ್ನಲ್ಲಿ ಯಾಕೆ ಆಗಲಿಲ್ಲ ಎಂದು ಡಾ. ಬಿ. ತಿಪ್ಪೇಸ್ವಾಮಿ ಪ್ರಶ್ನಿಸಿದರು.
ಚುನಾವಣಾ ಉಸ್ತುವಾರಿ ಎಸ್ಸಿ ಮಹದೇವಪ್ಪ ಬಂದಾಗ 8 ವಿಧಾನಸಭಾ ಕ್ಷೇತ್ರದ ಜನ ಬಂದಿದ್ರು, ಅವರೆಲ್ಲ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಹೇಳಿದ್ರು. ಚಿತ್ರದುರ್ಗದ ಶಾಸಕರು ನನಗೇ ಟಿಕೆಟ್ ನೀಡಿ ಅಂತಾ ಶಿಫಾರಸ್ಸು ಮಾಡಿದ್ರು. ಆದ್ರೆ ಈಗ ಬೇರೆಯವರಿಗೆ ಟಿಕೆಟ್ ನೀಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ರು.
ಬಿ ಪಾರ್ಮ್ ಕೊಟ್ಟಿಲ್ಲ, ಟಿಕೆಟ್ ಇನ್ನೂ ಬದಲಾವಣೆ ಮಾಡಲು ಅವಕಾಶವಿದೆ. ಈಗಲೂ ಅಭ್ಯರ್ಥಿ ಬದಲಾವಣೆ ಮಾಡಿದ್ರೆ ನಾವು ಜಯಭೇರಿ ಬಾರಿಸುತ್ತೇವೆ. ಎಲ್ಲಾ ವರಿಷ್ಠರು ನಮಗೆ ಸಾಮಾಜಿಕ ನ್ಯಾಯದಡಿ ಶಿಫಾರಸ್ಸು ಪತ್ರ ಕೊಟ್ಟಿದ್ರು. ಆದ್ರೆ ಪತ್ರಿಕೆಗೆ ಹೇಳಿ ಬರೆಸಿಕೊಂಡಿದ್ದಾರೆ ಅಂತಾ ಹೇಳಿದ್ದಾನೆ. ಪತ್ರಿಕಾ ಹೇಳಿಕೆ ಕೊಟ್ಟ ಮುಖಂಡರ ವಿರುದ್ಧ ಡಾ. ಬಿ.ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ರು.
ಇಷ್ಟು ಜನ ಶಿಫಾರಸ್ಸು ಮಾಡಿದ್ರೂ ಹೊರ ಜಿಲ್ಲೆಯವರಿಗೆ ಹೈ ಕಮಾಂಡ್ ಟಿಕೆಟ್ ನೀಡಿದ್ದಾರೆ. ಇದನ್ನು ಮರು ಪರಿಶೀಲನೆ ಮಾಡಬೇಕು ಅಂತಾ ಒತ್ತಾಯಿಸಿದ್ರು. ಟಿಕೆಟ್ ಬದಲಾವಣೆ ಮಾಡುತ್ತಾರೆ ಅಂತಾ ನಮಗೆ ವಿಶ್ವಾಸವಿದೆ. ಟಿಕೆಟ್ ಬದಲಾವಣೆ ಮಾಡದಿದ್ರೆ ನಮ್ಮ ಸಮುದಾಯದ ಸಭೆ ಕರೆಯುತ್ತೇವೆ. 8 ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆ ಮಾಡಿ ಮುಂದಿನ ನಡೆ ತೀರ್ಮಾನ ಮಾಡುತ್ತೇವೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಡಾ. ಬಿ. ತಿಪ್ಪೇಸ್ವಾಮಿ ತಿಳಿಸಿದರು.