ಚಿಕ್ಕೋಡಿ : ಹಿಂದುತ್ವವಾದಿ ಪ್ರತಾಪ್ ಸಿಂಹ ಟಿಕೆಟ್ ಮಿಸ್ ಆದ ಕಾರಣ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಶ್ರೀ ರಾಮಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದು ಸೋಶಿಯಲ್ ಮಿಡಿಯಾದಲ್ಲಿ ಒಂದ ವಿಡಿಯೋ ಹರಿ ಬಿಟ್ಟಿದ್ದಾರೆ. ಓರ್ವ ಪ್ರಾಮಾಣಿಕ ಸಕ್ರಿಯ ಹಿಂದುತ್ವವಾದಿಗೆ ಟಿಕೇಟ್ ಮಿಸ್ ಆಗಿರುವುದು ಒಂದ ಅಕ್ಷಮ್ಯ ಅಪರಾದ. ರಾಜ್ಯ ಮಟ್ಟದವರೂ ಯಾರೋ ಅದನ್ನು ತಪ್ಪಿಸಿದ್ದಾರೆ ಬಹಳ ದೊಡ್ಡ ತಪ್ಪು ಮಾಡಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.
ಒಬ್ಬ ಪ್ರಾಮಾಣಿಕ ಹಿಂದುತ್ವವಾದಿ ಯುವಕನಿಗೆ ಈ ರೀತಿ ಟಿಕೇಟ್ ಮಿಸ್ ಆಗಿರುವುದು, ಈ ರೀತಿ ನಿಮ್ಮ ಪ್ರವೃತ್ತಿ ಬದಲಾದರೆ ಕರ್ನಾಟಕದಲ್ಲಿ ಹಿಂದುತ್ವವಾದಿ ಉಳಿಯುವುದಿಲ್ಲ. ಪ್ರತಾಪ್ ಸಿಂಹ ಏನಾದರೂ ಒಂದು ತಪ್ಪಿದರೆ ಹೇಳಿ ಇದಕ್ಕೆ ಕರ್ನಾಟಕದ ಹಿಂದುವಾದಿಗಳು ಒಪ್ಪಲ್ಲ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದರು.