ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಕಾವು ಜೋರಾಗಿದೆ. ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ರಕ್ಷಾ ರಾಮಯ್ಯಗೆ ಟಿಕೆಟ್ ನೀಡುವಂತೆ ಅಲ್ಪಸಂಖ್ಯಾತ ಮುಖಂಡರು ಆಗ್ರಹಿಸಿದ್ದಾರೆ. ಅಲ್ಲದೆ ನಗರದ ಮೌಲಾನ ಸೈಯದ್ ಮುಸ್ಕಿಲ್ ಸಾಬ್ ದರ್ಗಾದಲ್ಲಿ ರಕ್ಷಾ ರಾಮಯ್ಯಗೆ ಟಿಕೆಟ್ ಸಿಗಲಿ ಎಂದು ಅಲ್ಪಸಂಖ್ಯಾತ ಮುಖಂಡರು ಪ್ರಾರ್ಥಿಸಿದರು.
ರಕ್ಷಾ ರಾಮಯ್ಯ ಅವರು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅವರಿಗೆ ಅಧಿಕಾರ ಸಿಕ್ರೆ ಮತ್ತಷ್ಟು ಒಳ್ಳೆ ಕೆಲಸ ಆಗುತ್ತೆ. ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸುವ ಪಟ್ಟಿಯಲ್ಲಿ ರಕ್ಷಾಗೆ ಟಿಕೆಟ್ ನೀಡಬೇಕು. ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ಕೊಟ್ರೆ ಅಲ್ಪಸಂಖ್ಯಾತರ ಮತಗಳು ಗ್ಯಾರಂಟಿ. ದೇವರು ಅವರಿಗೆ ಟಿಕೆಟ್ ದೊರಕುವಂತೆ ಮಾಡಲಿ ಎಂದು ಹಾರೈಸಿದರು.