ರಾಜ್ಯಸುದ್ದಿ

ಐದು ಲಕ್ಷ ದಾಖಲೆ ರಹಿತ ಹಣ ಪೋಲಿಸರ ವಶಕ್ಕೆ

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಚಿಕ್ಕಬಳ್ಳಾಪುರದ ಸುಲ್ತಾನ್ ಪೇಟೆ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ ಪೋಲಿಸರು ಭರ್ಜರಿ ಭೇಟೆಯಾಡಿದ್ದಾರೆ. ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರ ಕಡೆ ಬರುತ್ತಿದ್ದ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ಐದು ಲಕ್ಷ ದಾಖಲೆ ರಹಿತ ನಗದು ಹಣ ವಶಕ್ಕೆ ಪಡೆಯಲಾಗಿದೆ.

ಕಾರು ಚಾಲಕನ ಅನುಮಾನಾಸ್ಪದ ವರ್ತನೆ‌ ನೋಡಿ ವಾಹನ ತಡೆದ ಚುನಾವಣಾ ಸಿಬ್ಬಂದಿ, ಕಾರು ತಪಾಸಣೆ ಮಾಡಿದಾಗ ಅಕ್ರಮ ಹಣ ಸಾಗಿಸುತ್ತಿದ್ದುದ್ದು ಬಟ್ಟ ಬಯಲಾಗಿದೆ. ಸಧ್ಯ 5 ಲಕ್ಷ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.

Comments (0)

Your email address will not be published. Required fields are marked *

Back to top button