Thursday, January 29, 2026
22.8 C
Bengaluru
Google search engine
LIVE
ಮನೆರಾಜಕೀಯಡಾ.ಕೆ.ಸುಧಾಕರ್​ಗೆ ಬಿಜೆಪಿ ಟಿಕೆಟ್​ ನೀಡುವಂತೆ ಬೆಂಬಲಿಗರ ಅಗ್ರಹ

ಡಾ.ಕೆ.ಸುಧಾಕರ್​ಗೆ ಬಿಜೆಪಿ ಟಿಕೆಟ್​ ನೀಡುವಂತೆ ಬೆಂಬಲಿಗರ ಅಗ್ರಹ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ. ಕೆ ಸುಧಾಕರ್​ಗೆ ಟಿಕೆಟ್​ ಕೊಡುವಂತೆ ಬೆಂಬಗಲಿರು ಆಗ್ರಹಿಸಿದ್ದಾರೆ. ಇಂದು ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಒಕ್ಕಲಿಗರ ಸಂಘಟನೆಯಿಂದ ಸುದ್ದಿಗೋಷ್ಠಿ ನಡೆಸಿದ್ದು, ಡಾ. ಕೆ ಸುಧಾಕರ್​ಗೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್​ಗೆ ಬೆಂಬಲಿಗರು ಒತ್ತಡ ಹೇರಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 5 ಲಕ್ಷಕ್ಕೂ ಅಧಿಕ ಒಕ್ಕಲಿಗ ಮತದಾರರಿದ್ದಾರೆ. ಡಾ.ಕೆ.ಸುಧಾಕರ್ ಅಭಿವೃದ್ಧಿಯ ಹರಿಕಾರ. ಕಷ್ಟ ಕಾಲದಲ್ಲಿ ಬಿಜೆಪಿ ಪಕ್ಷಕ್ಕೆ ಬಂದವರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣಕರ್ತರು. ಇವರ ಶ್ರಮವನ್ನು ಅರಿತು ಅವರಿಗೇ ಟಿಕೆಟ್ ಕೊಡುವಂತೆ ಒತ್ತಾಯಿಸಿದರು.

ಸುಧಾಕರ್ ಗೆ ಟಿಕೆಟ್ ಕೊಟ್ರೆ ಒಕ್ಕಲಿಗರು ಅವರನ್ನು ಗೆಲ್ಲಿಸಿಕೊಳ್ಳುತ್ತಾರೆ ಎಂಬ ಭರವಸೆ ನೀಡಿದ್ರು. ಪಕ್ಷ ಯಾರಿಗೇ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇವೆ. ಆದ್ರೆ ನಮ್ಮೆಲ್ಲರ ಆಶಯ ಡಾ.ಕೆ ಸುಧಾಕರ್ ಮೇಲಿದೆ. ಹೀಗಾಗಿ ಡಾ. ಕೆ ಸುಧಾಕರ್​​ ಅವರಿಗೆ ಬಿಜೆಪಿ ಟಿಕೆಟ್​​ ಕೊಡುವಂತೆ ಬೆಂಬಲಿಗರು ಆಗ್ರಹಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments