ಚಾಮರಾಜನಗರ : ಕಾಡುಗಳ್ಳ, ನರಹಂತಕ, ದಂತಚೋರ ವೀರಪ್ಪನ್ ಗ್ಯಾಂಗ್ ನಲ್ಲಿದ್ದ ಸ್ಟೆಲ್ಲಾ ಮೇರಿ ಎಲ್ಲಾ ಕೇಸ್ ಗಳಿಂದ ಮುಕ್ತಳಾಗಿ ಹೊರಬಂದಿದ್ದಾಳೆ. ಸ್ಟೆಲ್ಲಾ ಮೇರಿ ಮೇಲಿದ್ದ ಎಲ್ಲಾ ಆರೋಪಗಳಿಂದ
ಚಾಮರಾಜನಗರ ಬಾಲನ್ಯಾಯ ಮಂಡಳಿ ಮುಕ್ತಗೊಳಿಸಿದೆ.
13ನೇ ವಯಸ್ಸಿನಲ್ಲಿ ಅಪಹರಣಕ್ಕೊಳಗಾಗಿ ವೀರಪ್ಪನ್ ಗ್ಯಾಂಗ್ ನಲ್ಲಿದ್ದ ಸ್ಟೆಲ್ಲಾ ಮೇರಿ ವಿರುದ್ದ ಪಾಲಾರ್ ಬಾಂಬ್ ಸ್ಟೋಟ, ರಾಮಾಪುರ ಠಾಣೆಗೆ ಬೆಂಕಿ ಇಟ್ಟ ಹಾಗೂ ಶಸ್ತ್ರಾಸ್ತ್ರ ಹೊತ್ತೊಯ್ದ ಪ್ರಕರಣಗಳಲ್ಲಿ ಆರೋಪ ಹೊರಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳ ವಿಚಾರಣೆ ನಡೆದ ಬಳಿಕ ಬರೋಬ್ಬರಿ 27 ವರ್ಷದ ನಂತರ 2020 ರಲ್ಲಿ ಸ್ಟೆಲ್ಲಾ ಮೇರಿಯನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಕಕ್ಷಿದಾರರ ಪರವಾಗಿ ಜುವೆನೈಲ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲ ಪಿ.ಪಿ.ಬಾಬುರಾಜ್ ಸ್ಟೆಲ್ಲಾ ಮೇರಿ ಮೇಲಿನ ಪ್ರಕರಣಗಳು ವಜಾ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.