Friday, August 22, 2025
24.8 C
Bengaluru
Google search engine
LIVE
ಮನೆರಾಜಕೀಯಚಕ್ರವರ್ತಿಗೆ ನಿರ್ಬಂಧ: ಪ್ರಿಯಾಂಕ್ ವಿರುದ್ಧ ಸಿಡಿದ ಸೂಲಿಬೆಲೆ

ಚಕ್ರವರ್ತಿಗೆ ನಿರ್ಬಂಧ: ಪ್ರಿಯಾಂಕ್ ವಿರುದ್ಧ ಸಿಡಿದ ಸೂಲಿಬೆಲೆ

ಕಲಬುರುಗಿಗೆ ಚಕ್ರವರ್ತಿ ಸೂಲಿಬೆಲೆ ನೋ ಎಂಟ್ರಿ ಅಂತ ನಿಷೇಧದ ಬೆನ್ನಲ್ಲೇ ಬೀದರ್ ನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ‌.

ನಮೋ ಭಾರತ ಕಾರ್ಯಕ್ರಮವನ್ನು ಕಾಂಗ್ರೆಸ್ ಅನೇಕ ಕಡೆ ತಡೆಯುವಂತಹ ಕೆಲಸ ಮಾಡುತ್ತಿದ್ದು ಕಾರ್ಯಕ್ರಮ‌ದ ಪರವಾನಿಗೆ, ಮೈಕ್ ಪರವಾನಗಿ ಕ್ಯಾನ್ಸಲ್ ಮಾಡಿ‌ ಕಾಂಗ್ರೆಸ್ ನನಗೆ ವಿನಾಕಾರಣ ಕಿರುಕುಳ‌ ನೀಡಿದೆ. ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕಾರ್ಯಕ್ರಮ ತಡೆಯುವ ಕೆಲ್ಸಾ ಆಗ್ತಿದ್ದು ಅವರ ಕ್ಷೇತ್ರದಲ್ಲಿ ಮೋದಿ ಸಾಧನೆ ಬಗ್ಗೆ ಮಾತನಾಡೋದನ್ನ ಅವರಿಂದ ಸಹಿಸೋಕೆ ಆಗ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಅಧಿಕಾರದ‌ ಮದ, ಆತಂಕದಿಂದ ಯಾವುದೇ ಕಾರಣಕ್ಕೂ ಚಿತ್ತಾಪುರದಲ್ಲಿ ಕಾರ್ಯಕ್ರಮ ನಡೆಯದಂತೆ ಪ್ಲ್ಯಾನ್ ಮಾಡಿದ್ದು ನಿನ್ನೆ ತಡರಾತ್ರಿ ತಹಸೀಲ್ದಾರ್ ಕಡೆಯಿಂದ ಪತ್ರ‌ ಕೊಟ್ಟು ನಿಮ್ಮ ಕಾರ್ಯಕ್ರಮ‌ ಕ್ಯಾನ್ಸಲ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಕಲಬುರಗಿಯ ಗಡಿಯಲ್ಲಿ ಯಾವ ಆದೇಶ ಇಲ್ದೇ ತಡೆಯುವ ಕೆಲ್ಸಾ‌ ಮಾಡಿದ್ದು ಮಧ್ಯರಾತ್ರಿವರಗೂ ಅಲ್ಲೆ ಇದ್ದು ಆದೇಶ ಪ್ರತಿ ಕೊಡೋವರೆಗೂ ಹೋಗಲ್ಲಾ ಎಂದು ಪಟ್ಟು ಹಿಡಿದಿದ್ದೆ. ಕೊನೆಯದಾಗಿ ಆದೇಶ ಪ್ರತಿಯನ್ನ 1 ಗಂಟೆಗೆ ಕೊಟ್ಟಿದ್ದಾರೆ.

ತುರ್ತಾಗಿ ಕಮಿಷನರ್ ಬಳಿ ಆದೇಶ ಕಾಪಿ ತಂದು ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ್ದು ವ್ಯಕ್ತಿಯೊಬ್ಬನ ಹಕ್ಕು ತಡೆಯುವ ಈ ಪ್ರಯತ್ನ ಅತ್ಯಂತ ಆತಂಕಕಾರಿ ಎಂದ್ರು. ಕರ್ನಾಟಕದಲ್ಲಿ ನಾವು ಹಾಕಿದ ಒಂದು ಓಟು ರಾಜ್ಯದಲ್ಲಿ ಎಂತಹ ಸರ್ಕಾರ ತಂದಿದೆ ನೋಡಿ ಎಂದು ಬೀದರ್ ನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ವಿರುದ್ಧ ಕೆಂಡಾ ಮಂಡಲವಾಗಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments