ದೆಹಲಿಯಲ್ಲಿ ನಡೆಯುತ್ತಿರುವ ಕಾರ್ಯಕಾರಣಿ ಸಭೆಯಿಂದ ರಾಜ್ಯ ಬಿಜೆಪಿಗೆ ಶಾಕಿಂಗ್ ನ್ಯೂಸ್ ಬಂದಿದೆ. ದೆಹಲಿಯ ವರಿಷ್ಠರು ರವಾನಿಸಿದ ಸ್ಫೋಟಕ ಸಂದೇಶಕ್ಕೆ ರಾಜ್ಯ ಬಿಜೆಪಿ ತತ್ತರಿಸಿದೆ. ದೆಹಲಿ ಬಿಜೆಪಿ ಹೈಕಮಾಂಡ್ ನಡೆಸಿದ ಸೀಕ್ರೆಟ್ ಸರ್ವೆ ಬಳಿಕ 300ಕ್ಕೂ ಹೆಚ್ಚು ರಾಜ್ಯ ನಾಯಕರಿಗೆ ಬುಲಾವ್ ಬಂದಿದೆ. ಬಿಜೆಪಿ ಹೈಕಮಾಂಡ್ ನಡೆಸಿದ ಸರ್ವೆಯಲ್ಲಿ ಶಾಕಿಂಗ್ ಫಲಿತಾಂಶ ಬಂದಿರುವ ಕಾರಣ ಸೋತವರು ಸೇರಿ 300ಕ್ಕೂ ಅಧಿಕ ನಾಯಕರರನ್ನ ತುರ್ತಾಗಿ ದೆಹಲಿಗರ ಬರುವಂತೆ ಆದೇಶ ನೀಡಲಾಗಿದೆ. ಕಾರ್ಯಕಾರಿಣಿಯಲ್ಲಿ ಸೀಕ್ರೆಟ್ ಸರ್ವೆಯ ಸ್ಫೋಟಕ ಅಂಶಗಳು ರಿವೀಲ್ ಆಗಿವೆ. ಕಳೆದ ಬಾರಿಗಿಂತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗರಿಷ್ಟ ಪ್ರಮಾಣದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಬಾರಿ ಲೋಕ ಕಣದಲ್ಲಿ ಬಿಜೆಪಿಯ ಪರ್ಫಾರ್ಮೆನ್ಸ್ ನಿರೀಕ್ಷಿತವಾಗಿಲ್ಲ. ಹೈಕಮಾಂಡ್ ಸರ್ವೆಯ ನಂಬರ್ಸ್ ನೋಡಿ ರಾಜ್ಯ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಕೂಡಲೇ ಅಲರ್ಟ್ ಆಗದಿದ್ರೆ ಗಂಡಾಂತರ ಗ್ಯಾರೆಂಟಿ ಎಂಬ ಸಂದೇಶ ರವಾನೆಯಾಗಿದೆ.
ಬಿಜೆಪಿ ಸೀಕ್ರೆಟ್ ಸರ್ವೆಯಲ್ಲಿ ಏನಿದೆ?
ಹೈಕಮಾಂಡ್ ನಡೆಸಿದ ಸರ್ವೆಯಲ್ಲಿ ಸ್ಫೋಟಕ ಅಂಶಗಳು ರಿವೀಲ್ ಆಗಿದ್ದು, ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗರಿಷ್ಟ 15 ಸೀಟ್ ಗೆಲ್ಲಲಿದೆ ಎಂದು ಸರ್ವೆ ರಿಪೋರ್ಟ್ ಬಂದಿದೆ. ಒಂದು ವೇಳೆ ಜೆಡಿಎಸ್ ಕೇಳಿದ ಕ್ಷೇತ್ರ ಬಿಟ್ಟು ಕೊಟ್ಟರೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಜಯ ಲಭಿಸಲಿದೆ. ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿ ಚುನಾವಣೆಗೆ ಹೋದರೂ 18 ಕ್ಷೇತ್ರಗಿಂತ ಹೆಚ್ಚಿನ ಸೀಟು ಗೆಲ್ಲಲು ಸಾಧ್ಯವಿಲ್ಲ. ಇಂಥ ಸ್ಫೋಟಕ ಸರ್ವೆ ರಿಸಲ್ಟ್ ನೋಡಿ ಹೈಕಮಾಂಡ್ ಕಂಗಾಲಾಗಿದೆ. ಕೂಡಲೇ ರಾಜ್ಯ ಬಿಜೆಪಿ ನಾಯಕರನ್ನು ಕರೆಸಿ ಹೈಕಮಾಂಡ್ ಛೀಮಾರಿ ಹಾಕಿದೆ. ಈಗಲೇ ಎಚ್ಚೆತ್ತುಕೊಂಡು ಕ್ಷೇತ್ರದಲ್ಲಿ ಸುತ್ತಾಡಿ ಮತದಾರರ ಮನವೋಲಿಸಿ ಹೆಚ್ಚು ಸೀಟು ಗೆಲ್ಲುವಂತೆ ಮಾಡದಿದ್ದರೆ ನಿಮಗೆ ಏನು ಗತಿ ಕಾಣಿಸಬೇಕು ಗೊತ್ತಿದೆ ಎಂದು ರಾಜ್ಯ ನಾಯಕರಿಗೆ ಹೈಕಮಾಂಡ್ ಖಡಕ್ ವಾರ್ನಿಂಗ್ ಕೊಟ್ಟಿದೆ.
ಬಿಜೆಪಿ ಹಿನ್ನೆಡೆಗೆ ಕಾರಣಗಳೇನು?
ರಹಸ್ಯ ಸಮೀಕ್ಷೆಯಲ್ಲಿ ಬಿಜೆಪಿ ಬಣ ಜಗಳ ಬಟಾಬಯಲು
ಪಕ್ಷದಲ್ಲಿ ಗುಂಪುಗಾರಿಕೆ, ಹಿರಿಯರ ಕಡೆಗಣನೆ,
ಪಕ್ಷಾಧ್ಯಕ್ಷರು, ವಿಪಕ್ಷ ನಾಯಕರ ಕಳಪೆ ಪರ್ಫಾರ್ಮೆನ್ಸ್
ಹಿರಿಯರನ್ನು ಪಕ್ಕಕ್ಕೆ ಇಟ್ಟು ಪದಾಧಿಕಾರಿಗಳ ನೇಮಕ
ಹಿರಿಯರ ಮಾರ್ಗದರ್ಶನವಿಲ್ಲದೆ ಕಾರ್ಯಕರ್ತರು ಕಂಗಾಲು
ಪಕ್ಷ ವಿರೋಧಿಗಳ ಬಾಯಿ ಮುಚ್ಚಿಸಲು ಸಾಧ್ಯವಿಲ್ಲದ ಪರಿಸ್ಥಿತಿ
ಜೊತೆಗೆ ಪಕ್ಷದಲ್ಲಿ ಹೆಡೆ ಎತ್ತಿರುವ ಜಾತಿ ರಾಜಕಾರಣ
ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ
ಲಿಂಗಾಯತ, ಒಕ್ಕಲಿಗ, ಕುರುಬ, ಎಸ್ಸಿ/ಎಸ್ಟಿ ಹೀಗೆ ಹರಿದು ಹಂಚಿರುವ ಕೇಸರಿ ಪಡೆ
ಈ ಬೆಳವಣಿಗೆಯಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆ