ಚಿಕ್ಕೋಡಿ : ನಾನು, ನನ್ನ ಆಪ್ತ ಸ್ನೇಹಿತ ಲಕ್ಷ್ಮಣ ಸವದಿ ಬಿಜೆಪಿಗೆ ಹೋಗುವ ಮಾತಿಲ್ಲಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು. ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೆ ರಾಜಕೀಯದಲ್ಲಿ ಹಲವು ಉಹಾಪೋಹಗಳು ಸೃಷ್ಟಿಯಾಗಿವೆ. ಈ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ್ ಖುರ್ದ್ ಪಟ್ಟಣದಲ್ಲಿ ಮಾತನಾಡಿದ ಅವರು, ನಾನು ನನ್ನ ಸ್ನೇಹಿತ ಲಕ್ಷ್ಮಣ ಸವದಿ ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದರು.
DCC ಬ್ಯಾಂಕ್ ಸಭೆಯಲ್ಲಿ ಸಭೆಗೆ ಬಿಜೆಪಿ ನಾಯಕರೊಟ್ಟಿಗೆ ಕಾಣಿಸಿಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, DCC ಬ್ಯಾಂಕ್ ಸಭೆಗೆ ಕಾಂಗ್ರೆಸ್ ಬಿಜೆಪಿ ನಾಯಕರು ಒಟ್ಟಾಗಿ ಬಂದಿದ್ದಾರೆ. ಆದ್ರೆ ಲಕ್ಷ್ಮಣ ಸವದಿ ಬಿಜೆಪಿಗೆ ಹೋಗುವುದು ಊಹಾಪೋಹವಷ್ಟೇ ಎಂದರು. ಜಗದೀಶ ಶೆಟ್ಟರ್ ನಮ್ಮ ಮನೆಗೆ ಊಟಕ್ಕೆ ಬಂದ್ರೆ, ನಾನು ಬಿಜೆಪಿಗೆ ಸೇರ್ತಿನಿ ಅಂತಾನಾ..? ಎಂದು ರಾಜು ಕಾಗೆ ಪ್ರಶ್ನಿಸಿದರು.