ಬೆಳಗಾವಿ : ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿ ಅಥಣಿ ಮತಕ್ಷೇತ್ರದ ಶಾಸಕರಗಿ ಆಯ್ಕೆಯಾದರು. ಮಾಜಿ ಶಾಸಕ ಮಹೇಶ ಕುಮಠಳ್ಳಿ ಸೋಲಿಸಿ ಶಾಸಕರಾದ ಸವದಿ ಹಾಗೂ ಮಹೇಶ ಕುಮಠಳ್ಳಿ ನಡುವೆ ಹಲವು ಕಾಮಗಾರಿಗಳ ವಿಚಾರವಾಗಿ ಕ್ರೆಡಿಟ್ ವಾರ್ ನಡೆಯುತ್ತಿದೆ.
ಬಿಜೆಪಿ ಆಡಳಿತದಲ್ಲಿದ್ದಾಗ ಶಂಕು ಸ್ಥಾಪನೆ ಆದ ಕಾಮಗಾರಿಗಳಿಗೆ ಸವದಿ ಅವರು ಮತ್ತೆ ಶಂಕು ಸ್ಥಾಪನೆ ಮಾಡಿ ಕಾಮಗಾರಿ ಮಾಡಿ ಕ್ರೆಡಿಟ್ ಪಡೆಯುತ್ತಿದ್ದಾರೆ ಎಂದು ಕುಮಠಳ್ಳಿ ಆರೋಪ ಮಾಡಿದ್ದರು. ಅದಕ್ಕೆ ಲಕ್ಷ್ಮಣ ಸವದಿ ಅವರು ತಿರುಗೇಟು ನೀಡಿ ಯಾವುದೋ ಕಾಮಗಾರಿಗೆ ಎಲ್ಲಿಂದಲೋ ಉದ್ಘಾಟನೆ ಮಾಡಿದ್ದರು. ಗುತ್ತಿಗೆದಾರರು ಯಾರು ಅಂತ ಗೊತ್ತಿರಲಿಲ್ಲ, ಯಾವುದೇ ಆಡಳಿತಾತ್ಮಕ ಮಂಜೂರಾತಿ ಇರಲಿಲ್ಲ. ಟೆಕ್ನಿಕಲ್ ಇರಲಿಲ್ಲ.. ಈವಾಗ ಎಲ್ಲ ಆಗ್ತಾ ಇದೆ. ಕುಮಠಳ್ಳಿಯವರು ಬೇಕಾದರೆ ಹಕ್ಕು ಚ್ಯೂತಿ ಮಾಡಲಿ ಧೈರ್ಯ ಇದ್ದರೆ ಅಂತ ಸವದಿ ಸವಾಲು ಹಾಕಿದರು.
ಲಕ್ಷ್ಮಣ್ ಸವದಿಗೆ ಪ್ರತ್ಯುತ್ತರವಾಗಿ ಉತ್ತರ ನೀಡಿದ ಕುಮಠಳ್ಳಿ ಅಥಣಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಬಿಜೆಪಿ ಸರ್ಕಾರದ್ದು. 896 ಕೋಟಿ ರೂ ವೆಚ್ಚದ ಕಾಮಗಾರಿಯನ್ನು ಮಾಜಿ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದರು. ಈಗ ಮತ್ತೆ ಕಾಂಗ್ರೆಸ್ ನವರು ಸಿಎಂ ಸಿದ್ದರಾಮಯ್ಯ ಕಡೆಯಿಂದ ಗುದ್ದಲಿ ಪೂಜೆ ಮಾಡುವುದು ಖಂಡನೀಯ. ಹಕ್ಕು ಚ್ಯುತಿ ಮಂಡನೆ ಮಾಡಬೇಕಾಗುತ್ತೆ. ಇದು ನಿಮಗೆ ಶೋಭೆ ತರಲ್ಲ ಮಹೇಶ ಕುಮಠಳ್ಳಿ ಪ್ರತ್ಯೂತ್ತರ ನೀಡಿದ್ದಾರೆ. ಏನೇ ಆಗಲಿ ಅಥಣಿಯಲ್ಲಂತು ಈಗ ಮಾಜಿ ಹಾಲಿ ಶಾಸಕರ ನಡುವೆ ಕಾಮಗಾರಿ ಕ್ರೆಡಿಟ್ ವಾರ ಜೋರಾಗಿದ್ದು ಯಾವ ಹಂತಕ್ಕೆ ತಲುಪುತ್ತೆ ಎಂದು ಕಾದು ನೋಡಬೇಕಾಗಿದೆ.