ಮೋದಿ ಹೆಸರು ಹೇಳಿ ಮತ ಕೇಳಿದ್ರೆ ಕಪಾಳಮೋಕ್ಷ ಮಾಡಿ ಎಂಬ ವಿವಾದಾತ್ಮಕ ಹೇಳಿಕೆ ಸಚಿವ ಶಿವರಾಜ್ ತಂಗಡಗಿಗೆ ಇದು ಶೋಭೆ ತರೋದಿಲ್ಲ, ಇದು ಅತಿರೇಕದ ಪರಾಮಾವಧಿ. ಇದು ಕಾಂಗ್ರೆಸ್ ಗೆ ಶೋಭೆ ತರುವಂತಹ ಮಾತುಗಳಲ್ಲ. ಹಗುರವಾದ ಮಾತುಗಳನ್ನು ಆಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಿಡಿಕಾರಿದ್ರು.
ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲಿಸಲು ಸಭೆ ಆಯೋಜಿಸಲಾಗಿದ್ದು, ಎಲ್ಲರೂ ಸೇರಿ ಶೆಟ್ಟರ್ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು. ಈ ಸಲ 28 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿ ಎಂದರು. ಮೋದಿ ಬಗ್ಗೆ ಮಾತನಾಡಿದ್ರೆ ದೊಡ್ಡವರು ಆಗ್ತೀವಿ ಅನ್ನೋ ಭ್ರಮೆ ಇದೆ. ಈ ಮೊದಲು ನಿರ್ಮಲಾ ಸೀತಾರಾಮ್ ಹಣಕಾಸಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇಂತಹ ಹಗುರವಾದ ಮಾತನ್ನ ಕಡಿಮೆ ಮಾಡಿ, ಈ ಮಾತುಗಳು ಸಿಎಂ ಸ್ಥಾನಕ್ಕೆ ಗೌರವ ತರುವಂತದಲ್ಲ ಎಂದು ಗುಡುಗಿದ್ರು.
ಮುಂದುವರೆದು ಮಂಡ್ಯದಲ್ಲಿ ಎಚ್ ಡಿ ಕುಮಾರಸ್ಚಾಮಿ ಸ್ಪರ್ಧೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸುಮಲತಾ ಅವರಿಗೆ ಬೇರೆ ಅವಕಾಶ ಇದೆ. ಸಮಾಧಾನದಿಂದ ಇದ್ರೆ ಮುಂದೆ ಅವಕಾಶ ಸಿಗುತ್ತೆ ಎಂದರು.