ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರು ಸಹ ಮೊಬೈಲ್ ಬಳಕೆ ಮಾಡುತ್ತಾರೆ. ಇಲ್ಲಿ ಮಹಿಳೆಯೊಬ್ಬರು ಸ್ಕೂಟಿಯಲ್ಲಿ ಹೋಗುವಾಗ ಮೊಬೈಲ್ ಬಿಡದೇ ಬಳಕೆ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೆಂಗಳೂರಿನ ಮಹಿಳೆಯೊಬ್ಬರ ಸ್ಕೂಟಿಯಲ್ಲಿನ ಜಾಲಿ ರೈಡ್ನ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಡ್ರೈವಿಂಗ್ ವೇಳೆ ಫೋನಿನಲ್ಲಿ ಮಾತಾನಾಡಲು ಈ ಮಹಿಳೆ ಹೊಸ ಟ್ರಿಕ್ಸ್ ಒಂದನ್ನು ಕಂಡು ಹುಡುಕಿದ್ದಾರೆ. ಹೆಲ್ಮೆಟ್ ಧರಿಸದೇ ತಲೆಗೆ ದುಪಟ್ಟಾವನ್ನು ಕಂಡು ಅದರೊಳಗೆ ಮೊಬೈಲ್ ಇಟ್ಟುಕೊಂಡು ಮಾತನಾಡುತ್ತಾ ಹಾಯಾಗಿ ಸ್ಕೂಟಿನಲ್ಲಿ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
https://twitter.com/i/status/1772955237021790690
@3rdEyeDude ಎಂಬ ಟ್ವಿಟರ್ ಖಾತೆಯಲ್ಲಿ ಮಾರ್ಚ್ 27ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡೇ ದಿನದಲ್ಲಿ 25 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಕಂಡು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.


