ಬೆಂಗಳೂರು: ರಾಜಧಾನಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ವಾಟರ್ ಟ್ಯಾಂಕರ್ ಮಾಫಿಯಾಗೆ ಕೊನೆಗೂ ಬಿಗ್ ಬ್ರೇಕ್ ಬಿದ್ದಿದೆ. ಖಾಸಗಿ ಟ್ಯಾಂಕರ್ಗಳಿಗೆ ರೇಟ್ ಫಿಕ್ಸ್ ಮಾಡಿದ್ದು, BBMP, BWSSB ಯಿಂದ ದರ ನಿಗದಿಗೆ ಮನವಿ ಮಾಡಲಾಗಿತ್ತು. ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಡಳಿತ ಸಲಹಾ ಸಮಿತಿ ಶಿಫಾರಸು ಪರಿಗಣಿಸಿ ಖಾಸಗಿ ಟ್ಯಾಂಕರ್ ಗಳಿಗೆ ದರ ನಿಗದಿ ಮಾಡಿದೆ. ಬೇಸಿಗೆ ಆರಂಭದಲ್ಲಿ ನೀರಿಗೆ ಒನ್ ಟು ಡಬಲ್ ರೇಟ್ ವಸೂಲಿ ಮಾಡುತ್ತಿದ್ದ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ಇದೇ ಮೊದಲ ಬಾರಿಗೆ ಖಾಸಗಿ ಟ್ಯಾಂಕರ್ ಗಳಿಗೆ ದರ ನಿಗದಿ ಮಾಡಿ ಆದೇಶಿಸಿದ್ದಾರೆ.
ನೀರಿನ ಕೊರತೆಯನ್ನೇ ಖಾಸಗಿ ಟ್ಯಾಂಕರ್ ಬಂಡವಾಳ ಮಾಡಿಕೊಂಡಿದೆ. ಇದೀಗ ವಾಟರ್ ಟ್ಯಾಂಕರ್ ಮಾಫಿಯಾಗೆ ಬೆಂಗಳೂರು ನಗರ ಜಿಲ್ಲಾಡಳಿತ ಕಡಿವಾಣ ಹಾಕಿದೆ. ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಆಧರಿಸಿ ನಗರದ ಡಿಸಿ ರೇಟ್ ಫಿಕ್ಸ್ ಮಾಡಿದ್ದಾರೆ. ನಾಲ್ಕು ತಿಂಗಳ ಅವಧಿಗೆ 200 ಖಾಸಗಿ ಟ್ಯಾಂಕರ್ಗಳಿಗೆ ದರ ನಿಗದಿಯಾಗಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರಿಂದ ರೇಟ್ ಫಿಕ್ಸ್ ಮಾಡಿದ್ದು, ನೀರು ಸರಬರಾಜು ಮಾಡಲು 200 ಖಾಸಗಿ ಟ್ಯಾಂಕರ್ ಗುತ್ತಿಗೆ ಮೇಲೆ ಬಳಕೆಯಾಗುತ್ತಿದೆ. ಹಾಗಾಗಿ ಜನರು ಖಾಸಗಿ ಟ್ಯಾಂಕರ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಟ್ಯಾಂಕರ್ಗಳಿಗೆ ರೇಟ್ ಫಿಕ್ಸ್ :
5 ಕಿ.ಮೀ. ವ್ಯಾಪ್ತಿಯಲ್ಲಿ 6000 ಲೀಟರ್ ಟ್ಯಾಂಕರ್ಗೆ 600 ರೂ.
8000 ಲೀಟರ್ ವಾಟರ್ ಟ್ಯಾಂಕರ್ಗೆ 700 ರೂ.
12000 ಲೀಟರ್ ವಾಟರ್ ಟ್ಯಾಂಕರ್ಗೆ 1000 ರೂ.
5 ಕಿಮೀನಿಂದ 10 ಕಿಮೀ ಒಳಗೆ ಬೇರೆ ರೇಟ್ ಫಿಕ್ಸ್
6000 ಲೀಟರ್ ವಾಟರ್ ಟ್ಯಾಂಕರ್ಗೆ 750 ರೂ.
8000 ಲೀಟರ್ ವಾಟರ್ ಟ್ಯಾಂಕರ್ 850 ರೂ.
12000 ಲೀಟರ್ ವಾಟರ್ ಟ್ಯಾಂಕರ್ಗೆ 1200 ರೂ.
GST ಅನ್ವಯ ಆಗುವಂತೆ ದರ ನಿಗದಿಪಡಿಸಿದ ಡಿಸಿ