ಜನರಿಗೆ ಕುಡಿಯುವ ನೀರು ಸಮಸ್ಯೆಯಾಗದಂತೆ ಹಾಗೂ ಪ್ರದೇಶಗಳಲ್ಲಿ ಇರುವಂತಹ ಜನಸಂಖ್ಯೆ ಆಧಾರದ ಮೇಲೆ ಅಗತ್ಯವಿರುವಷ್ಟು ನೀರನ್ನ ಸರಬರಾಜು ಮಾಡುವಂತೆ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇರುವಂತಹ ಬಂಡೆಪಾಳ್ಯ ಗ್ರಾಮಕ್ಕೆ ಇಂದು ಭೇಟಿ ನೀಡಿದಂತಹ ಅವರು ಉಚಿತವಾಗಿ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವ ವ್ಯವಸ್ಥೆಯನ್ನು ಪರಿಶೀಲಿಸಿದರು.ಗ್ರಾಮಸ್ಥರೊಂದಿಗೆ ಮಾತನಾಡಿದ ಅಧ್ಯಕ್ಷರು ನೀರಿನ ಸರಬರಾಜು ನೀರಿನ ಲಭ್ಯತೆ ನೀರಿನ ಗುಣಮಟ್ಟ ಎಲ್ಲದರ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು. ಬಂಡಿಪಾಳ್ಯದಲ್ಲಿ ನೀರಿನ ವಿತರಣೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಂತಹ ಸಂದರ್ಭದಲ್ಲಿ ಉಚಿತ ಟ್ಯಾಂಕರ್ ಮೇಲೆ ಸ್ಟಿಕ್ಕರ್ ಅನ್ನ ಅಂಟಿಸದೆ ಇರುವಂತಹ ಅಧಿಕಾರಿಗಳ ಮೇಲೆ ಜಲಮಂಡಳಿಯ ಅಧ್ಯಕ್ಷರಾದ ರಾಮಪ್ರಸಾತ್ ಮನೋಹರ್ ಅವರು ಗರಂ ಆದರು.

ಜಲಮಂಡಳಿ ವತಿಯಿಂದ ಉಚಿತವಾಗಿ ನೀರು ಸರಬರಾಜು ಮಾಡುತ್ತಿರುವಂತಹ ಟ್ಯಾಂಕರ್ ಗಳ ಮೇಲೆ ಉಚಿತ ಸ್ಟಿಕ್ಕರ್ ಅನ್ನು ಅಂಟಿಸುವುದು ಕಡ್ಡಾಯ,ಇನ್ನು ಅ ನಿಯಮ ಪಾಲಿಸದ ಅಧಿಕಾರಿಗಳನ್ನ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಅಧಿಕಾರಿಗಳಿಗೆ ಹಲವಾರು ಬಾರಿ ಸೂಚನೆ ನೀಡಲಾಗಿದೆ. ಆ ನೀರಿನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ,ಈ ಹಿನ್ನೆಲೆಯಲ್ಲಿ ಉಚಿತ ನೀರಿನ ಟ್ಯಾಂಕರ್ ಗಳ ಮೇಲೆ ಸ್ಟಿಕರ್ ಗಳನ್ನ ಅಳವಡಿಸಿರುವುದನ್ನ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು


