ನೀರಿಲ್ಲದೆ ಪರದಾಡುತ್ತಿರುವ ಬೆಂಗಳೂರು ಮಂದಿಗೆ ಗುಡ್ ನ್ಯೂಸ್ ಸಿಕ್ಕಿದೆ. ಖಾಸಗಿ ವಾಟರ್ ಟ್ಯಾಂಕರ್ ಮಾಲೀಕರಿಗೆ ಬೆಲೆ ನಿಗದಿ ಮಾಡುವ ಮೂಲಕ ಜಲಮಂಡಳಿ, ಶಾಕ್ ಕೊಟ್ಟಿದೆ. ರಿಯಾಯಿತಿ ದರದಲ್ಲಿ ಬೆಂಗಳೂರಿಗರಿಗೆ ಟ್ಯಾಂಕರ್ ನೀರು ಸಿಗುವಂತಹ ತೀರ್ಮಾನ ಕೈಗೊಂಡಿದೆ. ಕೇವಲ ₹360 ರೂಪಾಯಿಗೆ 6 ಸಾವಿರ ಲೀಟರ್ ನೀರು ಮಾರಾಟಕ್ಕೆ ಜಲಮಂಡಳಿ ನಿಗದಿ ಮಾಡಿದೆ. ಬೆಂಗಳೂರು ನಗರ ಜಿಲ್ಲಾಡಳಿತ ನಿಗದಿ ಮಾಡಿದ್ದಕ್ಕಿಂತ ಕಡಿಮೆ ದರದಲ್ಲಿ ನೀರು ಮಾರಾಟಕ್ಕೆ ಸೂಚನೆ ನೀಡಿದೆ. ಈ ಹಿಂದೆ ಬೆಂಗಳೂರು ನಗರ ಜಿಲ್ಲಾಡಳಿತ 6 ಸಾವಿರ ಲೀಟರ್ ₹510 ನಿಗದಿ ಮಾಡಿತ್ತು.
ಇದೀಗ ಅದಕ್ಕಿಂತಲೂ ಕಡಿಮೆ ದರದಲ್ಲಿ ಜಲಮಂಡಳಿ ಸಂಸ್ಕರಿಸಿದ ನೀರು ಒದಗಿಸೋಕೆ ಮುಂದಾಗಿದೆ. ಇನ್ನು ಈ ನೀರು ಕುಡಿಯೋದಿಕ್ಕೆ ಹೊರತುಪಡಿಸಿ ಇತರೆ ಚಟುವಟಿಕೆಗಳ ಬಳಕೆಗೆ ಮಾತ್ರ ಯೋಗ್ಯ ಎಂದು ತಿಳಿಸಿದೆ. ಅಂದಾಗೆ ನಗರದಿಂದ ಚರಂಡಿ ಸೇರುವ ನೀರನ್ನೇ ಶುದ್ದವಾಗಿ ಸಂಸ್ಕರಿಸಿ 1400 ಎಂಎಲ್ ಡಿ ನೀರನ್ನ ಬೆಂಗಳೂರಿಗರಿಗೆ ಕಡಿಮೆ ದರದಲ್ಲಿ ನೀಡೋದಿಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ನಿತ್ಯ 1212 MLD ನೀರು ತ್ಯಾಜ್ಯ ಸೇರುತ್ತಿದೆ. ಇದೇ ನೀರನ್ನು ಸಂಸ್ಕರಿಸಿ ಮರು ಬಳಕೆಗೆ ನೀಡಲು ಜಲಮಂಡಳಿ ತೀರ್ಮಾನ ಮಾಡಿದೆ.