Thursday, November 20, 2025
26.6 C
Bengaluru
Google search engine
LIVE
ಮನೆUncategorizedಓ ನಲ್ಲ ನೀರಿಲ್ಲ.. ಕುಡಿಯೋಕೆ... ತೊಳಿಯೋಕೆ... ನೀರಿಲ್ಲ

ಓ ನಲ್ಲ ನೀರಿಲ್ಲ.. ಕುಡಿಯೋಕೆ… ತೊಳಿಯೋಕೆ… ನೀರಿಲ್ಲ

ಬೆಂಗಳೂರು; ನೀರು ಮತ್ತು ನಾರಿಯರಿಗೆ ಅವಿನಾಭಾವ ಸಂಬಂಧ ಇದೆ. ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರು ಎದುರಿಸುತ್ತಿರುವ ನೀರಿನ ಬವಣೆ ಬಗ್ಗೆ ಮಾಜಿ ಉಪ ಮಹಾಪೌರ ಸಿ.ಆರ್.‌ ರಾಮ್‌ ಮೋಹನ್‌ ರಾಜ್‌ “ನೀರಿಲ್ಲ, ನೀರಿಲ್ಲ” ಎಂದು ರೀಲ್ಸ್ ಮಾಡಿ ಜೀವ ಜಲದ ಮಹತ್ವದ ಬಗ್ಗೆ ಅರಿವು ಮೂಡಿಸಿದ್ದಾರೆ.

ಮಹಿಳಾ ದಿನಾಚರಣೆ ಜೊತೆಗೆ ಮಹಿಳೆಯರ ಅಚ್ಚುಮೆಚ್ಚಿನ ಶಿವರಾತ್ರಿ ಹಬ್ಬದಲ್ಲೂ ನೀರಿಲ್ಲದೇ ಮಹಿಳೆಯರು ಪರಿತಪಿಸುತ್ತಿರುವುದನ್ನು ಈ ರೀಲ್ಸ್‌ ನೈಜ ಚಿತ್ರಣ ಕಟ್ಟಿಕೊಡುತ್ತದೆ.

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕಳೆದ ಏಳು ದಶಕಗಳಲ್ಲಿ ಕಂಡರಿಯದ ನೀರಿನ ಅಭಾವ ಎದುರಾಗಿದೆ. ಕುಡಿಯಲು ನೀರಿಲ್ಲ. ಕನಿಷ್ಠ ಪಕ್ಷ ಶೌಚಾಲಯಕ್ಕೂ ನೀರಿಲ್ಲದ ಪರಿಸ್ಥಿತಿ ಎದುರಾಗಿರುವುದನ್ನು ಖಾಲಿ ಕೊಡೆಗಳ ಮೂಲಕ ರೀಲ್ಸ್‌ ಮಾಡಿದ್ದಾರೆ. ಜನಪ್ರತಿಯೊಬ್ಬರು ಮಹಿಳೆಯರ ಜೊತೆಗೂಡಿ ಸಾಮಾಜಿಕ ಅರಿವು ಮೂಡಿಸುವ ಪ್ರಯತ್ನ ನಡೆಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments