Monday, December 8, 2025
18.9 C
Bengaluru
Google search engine
LIVE
ಮನೆUncategorizedಸ್ವಿಗ್ಗಿ ಡೆಲಿವರಿ ಬಾಯ್‌ನಿಂದ ಮಹಿಳಾ ಟೆಕ್ಕಿಗೆ ಲೈಂಗಿಕ ದೌರ್ಜನ್ಯ

ಸ್ವಿಗ್ಗಿ ಡೆಲಿವರಿ ಬಾಯ್‌ನಿಂದ ಮಹಿಳಾ ಟೆಕ್ಕಿಗೆ ಲೈಂಗಿಕ ದೌರ್ಜನ್ಯ

ಬೆಂಗಳೂರು: ಸ್ವಿಗ್ಗಿಯಲ್ಲಿ ದೋಸೆ ಆರ್ಡರ್ ಮಾಡಿದ 30 ವರ್ಷದ ಸಾಫ್ಟ್‌ವೇರ್ ಮಹಿಳಾ ಇಂಜಿನಿಯರ್‌ ಮೇಲೆ ಡೆಲಿವರಿ ಬಾಯ್‌ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಸಿಸಿಟಿವಿ ದೃಶ್ಯಗಳ ಮೂಲಕ ಅಪರಾಧಿಯನ್ನು ಆಕಾಶ್ ಎಂದು ಗುರುತಿಸಲಾಗಿದೆ. ಎಇಸಿಎಸ್ ಲೇಔಟ್‌ನಲ್ಲಿ ಮಹಿಳೆಗೆ ಡೆಲಿವರಿ ಬಾಯ್ ಕಿರುಕುಳ ನೀಡಿದ್ದು, ದೈಹಿಕ ಘರ್ಷಣೆಗೆ ಕಾರಣವಾಗಿತ್ತು. ಘಟನೆ ಮಾ.17ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಟೆಕ್ಕಿ ಮಹಿಳೆಯು ಸ್ವಿಗ್ಗಿಯಲ್ಲಿ ಸಂಜೆ 6.45ಕ್ಕೆ ಹತ್ತಿರದ ರೆಸ್ಟೋರೆಂಟ್‌ನಿಂದ ದೋಸೆ ಆರ್ಡರ್ ಮಾಡಿದ್ದರು. ಆಹಾರ ಡೆಲಿವರಿ ಮಾಡಿದ 20 ವರ್ಷದ ಹುಡುಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.

‘ಸೌಜನ್ಯಕ್ಕಾಗಿ, ನಾನು ಅವನಿಗೆ (ಡೆಲಿವರಿ ಬಾಯ್) ಕುಡಿಯಲು ನೀರು ಬೇಕೇ ಎಂದು ಕೇಳಿದೆ. ಅವನು ಹೌದು ಎಂದ. ನಾನು ಒಳಗೆ ಹೋಗಿ ಅವನಿಗೆ ಒಂದು ಲೋಟ ನೀರು ಕೊಟ್ಟ ನಂತರ ಅವನು ಹೊರಟುಹೋದ’ ಎಂದು ಮಹಿಳೆ ಘಟನೆ ವಿವರಿಸಿದ್ದಾರೆ. ಅದರೆ ಕೆಲ ಸೆಕೆಂಡುಗಳ ನಂತರ, 20ರ ಹರೆಯದ ಹುಡುಗ ಮತ್ತೆ ಅವಳ ಮನೆಯ ಬಾಗಿಲು ತಟ್ಟಿ, ‘ಮೇಡಮ್ ನಾನು ನಿಮ್ಮ ವಾಶ್‌ರೂಮ್ ಬಳಸಬಹುದೇ? ತುಂಬಾ ಅರ್ಜೆಂಟ್ ಆಗಿದೆ’ ಎಂದಿದ್ದಾನೆ.

‘ನಾನು ಅವನನ್ನು ವಾಶ್‌ರೂಮ್‌ ಬಳಸಲು ಅವಕಾಶ ನೀಡಿದೆ. ಅವನು ಹೊರಗೆ ಬಂದ ತಕ್ಷಣ, ನಾನು ಅವನನ್ನು ಹೊರಡಲು ಹೇಳಿದೆ. ‘ಮತ್ತೆ ಸ್ವಲ್ಪ ನೀರು ಕೊಡ್ತೀರಾ?’ ಎಂದು ಕೇಳಿದ. ಅದಕ್ಕೆ ನಾನು ಒಪ್ಪಿ ಬಾಗಿಲ ಬಳಿ ಕಾಯುವಂತೆ ಹೇಳಿದೆ. ಆದರೆ, ಅವನು ನನ್ನನ್ನು ಹಿಂಬಾಲಿಸಿ ಅಡುಗೆಮನೆಗೆ ಬಂದ. ನನ್ನ ಕೈಯನ್ನು ಹಿಡಿದ. ಅವನು ಏನು ಮಾಡುತ್ತಿದ್ದಾನೆ ಮತ್ತು ಅವನು ಅಡುಗೆಮನೆಗೆ ಏಕೆ ಬಂದ ಎಂದು ಕೇಳುತ್ತಾ ಕೂಗಲು ಪ್ರಾರಂಭಿಸಿದೆ. ಅವನು ಇನ್ನೂ ನನ್ನ ಕೈ ಹಿಡಿದಿದ್ದರಿಂದ, ನಾನು ಬಾಣಲೆ ತೆಗೆದುಕೊಂಡು ಅವನ ಬೆನ್ನಿಗೆ ಹೊಡೆದೆ. ಆಗ ಅವನು ಮನೆಯಿಂದ ಓಡಿಹೋದ. ನಾನೂ ಅವನ ಹಿಂದೆ ಲಿಫ್ಟ್‌ವರೆಗೆ ಓಡಿದೆ, ಆದರೆ ಅವನು ಮೆಟ್ಟಿಲಿನ ಮೂಲಕ ಓಡಿಹೋಗಿ ತಪ್ಪಿಸಿಕೊಂಡ ಎಂದು ಮಹಿಳೆ ವಿವರಿಸಿದ್ದಾರೆ.

ಬಳಿಕ ಮಹಿಳೆಯು 112 ಹಾಗೂ ಹೊಯ್ಸಳ ಪೋಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಘಟನೆ ನಡೆದ ದಿನದಿಂದ ಕೆಲಸಕ್ಕೆ ಗೈರಾಗಿರುವ ಆಕಾಶ್, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಬಳಿಕ ಮಹಿಳೆ ಇರುವ ನಾಲ್ಕನೇ ಮಹಡಿಗೆ ಡೆಲಿವರಿ ಏಜೆಂಟ್‌ಗಳನ್ನು ಒಳಬಿಡಲಾಗುತ್ತಿಲ್ಲ. ಗೇಟ್‌ನಲ್ಲಿಯೇ ಡೆಲಿವರಿ ಐಟಂ ಕೊಟ್ಟು ಹೋಗುವ ಕ್ರಮ ಅನುಸರಿಸಲಾಗುತ್ತಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments