ಅಕ್ರಮ- ಭ್ರಷ್ಟಚಾರ ವಿಚಾರದಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ನಿಲ್ಲುವ ಸರ್ಕಾರಿ ಇಲಾಖೆ ಅಂದರೆ ಅದು ಬಿಡಿಎ. ಒಂದಲ್ಲ ಒಂದು ವಿಚಾರದಲ್ಲೂ ಯಾವಾಗಲೂ ಸುದ್ದಿಮಾಡುತ್ತಲೇ ಇರುತ್ತೆ ಬಿಡಿಎ . ಇದೀಗ ಲೇಔಟ್ ನಿರ್ಮಾಣದ ವಿಚಾರದಲ್ಲಿ ಬಿಡಿಎ ಬಾರಿ ಸುದ್ದಿ ‘ಮಾಡ್ತಿದೆ.

ಹೌದು.. ಬೆಂಗಳೂರು ಉತ್ತರ ಭಾಗದಲ್ಲಿ ಬಿಡಿಎ ಹೊಸದಾಗಿ ಡಾ.ಶಿವರಾಮ ಕಾರಂತ ಮುಂದುವರೆದ ಲೇಔಟ್ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಇದು ಯಲಹಂಕ ಸುತ್ತಮುತ್ತಿನ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಬಿಡಿಎ ಆಯುಕ್ತ ಎನ್ ಜಯರಾಮ್, ಶಿವರಾಮ ಕಾರಂತ ಮುಂದುವರೆದ ಲೇಔಟ್ ನಿರ್ಮಾಣಕ್ಕೆ ಕಚೇರಿ ಸುತ್ತೋಲೆ ಹೊರಡಿಸಿದ ಬೆನ್ನಲ್ಲೇ ಯಲಹಂಕ ಸುತ್ತಮುತ್ತಿನ ರೈತರು ಬಿಡಿಎ ಕೇಂದ್ರ ಕಚೇರಿ ಮುಂದೆ ಕಳೆದ ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿ ಕೂಡಲೇ ಶಿವರಾಮ ಕಾರಂತ ಮುಂದುವರೆದ ಲೇಔಟ್ ನಿರ್ಮಾಣ ಕೈ ಬಿಡಬೇಕೆಂದು ಒತ್ತಾಯಿಸಿದ್ರು.

ಆದ್ರೆ ಬಿಡಿಎ ಆಯುಕ್ತ ಎನ್ ಜಯರಾಮ್ ಪಟ್ಟು ಬಿಡದ ಶಿವರಾಮ ಕಾರಂತ ಮುಂದುವರೆದ ಲೇಔಟ್ ಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸೋಕೆ ಸಿದ್ದತೆ ಮಾಡಿಕೊಳ್ಳಿತ್ತಿದ್ದಾರೆ. ಇದು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಬಿಡಿಎ ಆಯುಕ್ತರಿಗೆ ಕರೆ ಮಾಡಿ ಮಾತನಾಡಿರೋ ಯಲಹಂಕ ಶಾಸಕರು, ಕೂಡಲೇ ಶಿವರಾಮ ಕಾರಂತ ಮುಂದುವರೆದ ಲೇಔಟ್ ನಿರ್ಮಾಣ ಕೈಬಿಡಿಎ ಇಲ್ಲದ್ರೆ ಹೋರಾಟ ಮಾಡೋಬೇಕಾಗುತ್ತೆ ಅಂತ ಎಚ್ಚರಿಕೆ ನೀಡದ್ದಾರೆ.

ಮೊದಲ ಹಂದಲ್ಲಿ 3564 ಎಕರೆ ಜಾಗದಲ್ಲಿ ನಿರ್ಮಾಣ ಮಾಡಿರೋ ಶಿವರಾಮ ಕಾರಂತ ಲೇಔಟ್ ನಿಂದ ಯಲಹಂಕ ಸುತ್ತಮುತ್ತಿನ ರೈತರ ಬದುಕು ಬೀದಿಗೆ ಬಂದಿದೆ. ಇದೀಗ ಶಿವರಾಮ ಕಾರಂತ ಮುಂದುವರೆದ ಲೇಔಟ್ ನಿರ್ಮಾಣ ಮಾಡಿದ್ರೆ ಕ್ಷೇತ್ರ ರೈತರಿಗೆ ತೊಂದರೆ ಆಗುತ್ತೆ. ಕೂಡಲೇ ಶಿವರಾಮ ಕಾರಂತ ಮುಂದುವರೆದ ಲೇಔಟ್ ನಿರ್ಮಾಣ ಕೈಬಿಡಬೇಕು ಅಂತ ಎಸ್ ಆರ್ ವಿಶ್ವನಾಥ್ ;ಒತ್ತಾಯಿಸಿದ್ದಾರೆ. ಒಂದು ವೇಳೆ ಬಿಡಿಎ ಆಯುಕ್ತರು ಲೇಔಟ್ ನಿರ್ಮಾಣ ಕೈ ಬಿಡದಿದ್ರೆ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಲಾಗ್ತದೆ ಅಂತ ಎಸ್ ಆರ್ ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.

By admin

Leave a Reply

Your email address will not be published. Required fields are marked *

Verified by MonsterInsights