Freedom TV

ರಾಮೇಶ್ವರಂ ಕೆಫೆ ಬ್ಲ್ಯಾಸ್ಟ್: ಈ ಹಿಂದೆಯೂ ನಡೆದಿತ್ತಾ ಅಟೆಂಪ್ಟ್?

ಸಿಲಿಕಾನ್ ಸಿಟಿ ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಇಂದು ಮಧ್ಯಾಹ್ನ ಸುಮಾರು 12.56ಕ್ಕೆ ಸಂಭವಿಸಿರುವ ನಿಗೂಢ ಸ್ಫೋಟ ನಗರದ ನಿವಾಸಿಗಳನ್ನ ಆತಂಕಕ್ಕೆ ದೂಡಿದೆ. ಎಲ್ಲಾ ತನಿಖಾ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಎನ್ ಐ ಎ, ಎಫ್ ಎಸ್ ಎಲ್ ಟೀಮ್ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ ಸೇರಿದಂತೆ ಅನೇಕ ತನಿಖಾ ತಂಡಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಾಟಿಗೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಪೋಟ ಹೇಗಾಯಿತು, ಸ್ಪೋಟಗೊಂಡ ವಸ್ತು ಏನು ಅನ್ನೋದು ಇನ್ನೂ ಗೊತ್ತಾಗಬೇಕಿದೆ. ಗೃಹ ಇಲಾಖೆಯಿಂದ ಹೇಳಿಕೆ ಇನ್ನೂ ಬಂದಿಲ್ಲ. ಬೆಂಗಳೂರು ನಗರ ಪೊಲೀಸ್ ಕಮೀಶನರ್ ಬಿ ದಯಾನಂದ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆಫೆಯ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಹೇಳುವ ಹಾಗೆ, ಈ ಹಿಂದೆಯೂ ಅನೇಕ ರೀತಿಯ ಅಟೆಂಪ್ಟ್ ಗಳು ನಡೆದಿದ್ದವಂತೆ. ಈಗ ಅಪರಿಚಿತರು ಕೆಫೆಯ ವಾಷ್ ಬೇಸಿನ್ ಬಳಿ ಬ್ಯಾಗ್ ಇಟ್ಟು ಹೋಗಿದ್ದರಂತೆ.. ಬ್ಯಾಗ್ ಇರಿಸಿದ್ದ ಸ್ಥಳದಲ್ಲೇ ಸ್ಫೋಟವಾಗಿದೆ. ಭಾರೀ ಸ್ಫೋಟದ ಸದ್ದನ್ನು ಸುತ್ತಮುತ್ತಲಿನ ಜನ ಕೇಳಿಸಿಕೊಂಡಿದ್ದಾರೆ.

ಮೊದಲಿಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿತ್ತು ಅದರೆ ಎಕ್ಸ್ ಪ್ಲೋಡ್ ಅಗಿದ್ದು ಸಿಲಿಂಡರ್ ಅಲ್ಲವೆಂದು ದಿವ್ಯಾ ಸ್ಪಷ್ಟಪಡಿಸಿದ್ದಾರೆ. ಸ್ಪೋಟದಲ್ಲಿ ಕೆಫೆಯ ಸಿಬ್ಬಂದಿ ಪೈಕಿ ಮೂವರು ಮತ್ತು ನಾಲ್ವರು ಗ್ರಾಹಕರು ಗಾಯಗೊಂಡಿದ್ದು ಅವರೆಲ್ಲರಿಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇದಕ್ಕೆ ಮೊದಲು ಕೂಡ ಯಾರೋ ಅಪರಿಚಿತರು, ಎರಡು ಬ್ಯಾಗ್ ಗಳನ್ನು ತಂದು ಒಂದನ್ನು ಅದೇ ವಾಷ್ ಬೇಸಿನ್ ಬಳಿ ಮತ್ತೊಂದನ್ನು ಜನರ ಓಡಾಟ ಕಡಿಮೆ ಇರುವ ಸ್ಥಳದಲ್ಲಿ ಇರಿಸಿ ಹೋಗಿದ್ದರಂತೆ. ಪೊಲೀಸರು ಬಂದು ಪರಿಶೀಲಿಸಿದಾಗ ಒಂದು ಬ್ಯಾಗಲ್ಲಿ ಒಡೆದ ಮಡಕೆ ಚೂರುಗಳಿದ್ದವಂತೆ ಹಾಗೂ ಪೊಲೀಸರು ಅಲ್ಲಿಂದ ತೆಗೆದುಕೊಂಡು ಹೋದ ಇನ್ನೊಂದು ಬ್ಯಾಗಲ್ಲಿ ಏನಿತ್ತು ಅನ್ನೋದು ಗೊತ್ತಾಗಿಲ್ಲ…ಸ್ಪೋಟದ ಹಿಂದೆ ರಹಸ್ಯ ಅಡಗಿರೋದಂತೂ ಸತ್ಯ..ತನಿಖೆ ಚುರುಕಾಗಿ ನಡೆಯುತ್ತಿದೆ.

Comments (0)

Your email address will not be published. Required fields are marked *

Back to top button